ಗುಜರಾತ್‌ಕುರಿತು ಮುಂಬಯಿಯಲ್ಲಿ ಚರ್ಚೆ: ಪುನರುಚ್ಚರಿಸಿದ ಅಟಲ್
ಗುಜರಾತ್‌ಕುರಿತು ಮುಂಬಯಿಯಲ್ಲಿ ಚರ್ಚೆ: ಪುನರುಚ್ಚರಿಸಿದ ಅಟಲ್
ಜೂನ್22ರಿಂದ 24ರತನಕ ಮುಂಬಯಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
ಸಭೆಯಲ್ಲಿ ತೆರೆದ ಮನಸ್ಸಿನಿಂದ ಗುಜರಾತ್ ಕುರಿತು ಚರ್ಚಿಸಲಿದ್ದೇವೆ. ಇಂತಹ ವಿಷಯದ ಕುರಿತು ಸೋಲು-ಗೆಲುವಿನ ಮೊದಲು ಮತ್ತು ಬಳಿಕವೂ ಚರ್ಚಿಸಲು ನಮಗೆ ಭಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ವಿಹಾರಕ್ಕಾಗಿ ಮನಾಲಿಗೆ ಆಗಮಿಸಿದ್ದರು. ಅಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದರು.
ಮುಂಬಯಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಜೂನ್22ರಿಂದ 24ರತನಕ ನಡೆಯಲಿದೆ. ವಾರದ ಹಿಂದೆಯಷ್ಟೆ ವಾಜಪೇಯಿ ಬಿಜೆಪಿ ಸೋಲಿಗೆ ಗುಜರಾತ್ ಗಲಭೆ ಕಾರಣ. ಆನಿಟ್ಟಿನಲ್ಲಿ ಮುಂಬಯಿ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದರು. ಇದು ರಾಷ್ಟ್ರ ವ್ಯಾಪ್ತಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು ಈ ವಿಚಾರವನ್ನು ತಳ್ಳಿಹಾಕಿದ್ದರು.
ಯಾರು ಗೆಲ್ಲ ಬೇಕಾಗಿತ್ತೋ ಅವರು ಗೆದ್ದಿದ್ದಾರೆ. ಯಾರು ಸೋಲ ಬೇಕಾಗಿತ್ತೋ ಅವರು ಸೋತಿದ್ದಾರೆ. ಗೆದ್ದ ಸಂತಸದಲ್ಲಿ ಜನತೆಯನ್ನು ತಮ್ಮ ಜೊತೆ ಕೊಂಡೊಯ್ಯಾಲು ಮರೆತಿದ್ದಾರೆ. ಹಾಗೆ ಸೋತಿದ್ದಾರೆ ಎಂದು ಸೈದ್ಧಾಂತಿಕವಾಗಿ ಮಾತನಾಡಿದರು.
ಜನರಿಗೆ ಮಿತ್ರ ಪಕ್ಷಗಳ ಮೇಲಿದ್ದ ಸಿಟ್ಟೇ ಚುನಾವಣೆಯ ಸೋಲಿಗೆ ಕಾರಣ. ಐವತ್ತಾರು ವರ್ಷಗಳಲ್ಲಿ ನಾವು ಮುಂದುವರಿದ ರಾಷ್ಟ್ರವಾಗದೇ ಇರುವುದು ಬೇಸರವನ್ನುಂಟು ಮಾಡಿದೆ. ಆದರೆ ವಿಶ್ವಸಂಸ್ಥೆಯ ರಕ್ಷಣಾ ಮಂಡಳಿಯಲ್ಲಿ ನಮಗೆ ಖಾಯಂ ಸ್ಥಾನ ನೀಡುವ ಸಾಧ್ಯತೆ ಇತ್ತು ಎಂದು ಹೇಳಿದರು.
ಚುನಾವಣೆ ಮುಗಿದು ಹೋಗಿದೆ. ಈಗ ಗೆದ್ದವರು-ಸೋತವರು ಭವಿಷ್ಯದ ಬಗ್ಗೆ ಆಲೋಚಿಸ ಬೇಕು. ಸದ್ಯದಲ್ಲೇ ಚುನಾವಣೆ ಬಂದರೂ ಬರಬಹುದು. ನಾನು ಮೊದಲ ಬಾರಿಗೆ 1957ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಎರಡು ಜೀಪು ಪ್ರಚಾರಕ್ಕೆ ಸಾಕಾಗಿತ್ತು. ಒಂದು ನಾನು ಅಣಿಗೊಳಿಸಿದ್ದರೆ. ಇನ್ನೊಂದು ಪಕ್ಷ ನೀಡಿತ್ತು. ಈಗ ಚುನಾವಣೆಗಳೇ ಬದಲಾಗಿದೆ ಎಂದು ಹೇಳಿದರು.
(ಪಿಟಿಐ)
ವಾರ್ತಾ ಸಂಚಯ
ಗೋವಾ ಸರ್ಕಾರದ ಕ್ರಮ : ಸಹಸ್ರಾರು ಕನ್ನಡಿಗರು ಬೀದಿ ಪಾಲು
ಮುಖಪುಟ / ವಾರ್ತೆಗಳು












Click it and Unblock the Notifications