ಬೆಳೆ ರಕ್ಷಿಸಲು ಕಾವೇರಿ ಹರಿಸಿರಿ;ಧರ್ಮಸಿಂಗ್‌ಗೆ ತಮಿಳ್ನಾಡು ನಿಯೋಗ ಮೊರೆ
ಬೆಳೆ ರಕ್ಷಿಸಲು ಕಾವೇರಿ ಹರಿಸಿರಿ;ಧರ್ಮಸಿಂಗ್‌ಗೆ ತಮಿಳ್ನಾಡು ನಿಯೋಗ ಮೊರೆ
ರಾಜ್ಯ ಸರ್ಕಾರದ ನಿಲುವು ಅಚಲ - ವಿಧಾನಮಂಡಲದಲ್ಲಿ ಖರ್ಗೆ
ಲೋಕೋಪಯೋಗಿ ಸಚಿವ ಒ.ಪನ್ನೀರ್‌ಸೆಲ್ವಂ ನೇತೃತ್ವದ ತಮಿಳುನಾಡಿನ ನಿಯೋಗ ಜೂ.16ರ ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಭೇಟಿ ಮಾಡಿ ನೀರುಬಿಡುವಂತೆ ಮನವಿ ಮಾಡಿತು. ಈ ಕುರಿತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಬರೆದಿರುವ ಅಧಿಕೃತ ಮನವಿ ಪತ್ರವನ್ನು ನಿಯೋಗ ಧರ್ಮಸಿಂಗ್‌ರಿಗೆ ಹಸ್ತಾಂತರಿಸಿತು.
ಧರ್ಮಸಿಂಗ್‌ರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪನ್ನೀರ್‌ಸೆಲ್ವಂ, ಮುಖ್ಯಮಂತ್ರಿಗಳೊಂದಿಗಿನ ಭೇಟಿ ಹಾಗೂ ಮಾತುಕತೆ ಸೌಹಾರ್ದಯುತವಾಗಿತ್ತು . ತಮಿಳುನಾಡಿನ ಮನವಿಯನ್ನು ಪರಿಶೀಲಿಸುವುದಾಗಿ ಧರ್ಮಸಿಂಗ್ ಆಶ್ವಾಸನೆ ನೀಡಿದ್ದಾರೆ ಎಂದರು.
ಈ ನಡುವೆ, ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರದ ನಿಲುವು ಅಚಲವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ಬುಧವಾರ ವಿಧಾನಮಂಡಲದಲ್ಲಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ತಮಿಳುನಾಡಿಗೆ ತೊಟ್ಟು ನೀರೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಧರ್ಮಸಿಂಗ್ ಈ ಮುನ್ನ ಹೇಳಿದ್ದರು.
(ಪಿಟಿಐ)
ಮುಖಪುಟ / ಕಾವೇರಿ












Click it and Unblock the Notifications