90ರ ಕನಸಲ್ಲಿ ಕನ್ನಂಬಾಡಿ : ರಾಜ್ಯದ ಜಲಾಶಯಗಳಲ್ಲಿ ಗಂಗಾವತರಣ
90ರ ಕನಸಲ್ಲಿ ಕನ್ನಂಬಾಡಿ : ರಾಜ್ಯದ ಜಲಾಶಯಗಳಲ್ಲಿ ಗಂಗಾವತರಣ
ಜೀವ ತುಂಬಿಕೊಂಡ ಜಲಪಾತಗಳು, ನದಿಗಳಲ್ಲಿ ಸೊಕ್ಕು
ಜೂನ್ 14ರ ಸೋಮವಾರ ಕೃಷ್ಣರಾಜ ಸಾಗರ ಜಲಾಶಯದ ಒಳ ಹರಿವು 11,044 ಕ್ಯುಸೆಕ್ಸ್‌ಗಳಷ್ಟಿತ್ತು . ಇದು 2004ರಲ್ಲಿ ದಾಖಲಾದ ಗರಿಷ್ಠ ಮಟ್ಟದ ಒಳಹರಿವು. ಮಳೆಯ ಪ್ರಮಾಣ ಇದೇರೀತಿ ಮುಂದುವರೆದಲ್ಲಿ ಜಲಾಶಯದ ನೀರಿನ ಮಟ್ಟ ಶೀಘ್ರದಲ್ಲೇ 90 ಅಡಿ ಮುಟ್ಟುವ ನಿರೀಕ್ಷೆಯಿದೆ.
ಪ್ರಸ್ತುತ ಕೆಆರ್‌ಎಸ್‌ನಲ್ಲಿ 86 ಅಡಿ ನೀರಿನ ಸಂಗ್ರಹವಿದ್ದು , ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 68 ಅಡಿ ನೀರಿನ ಸಂಗ್ರಹವಿತ್ತು . ಜಲಾಶಯದ ಗರಿಷ್ಠ ಜಲ ಸಂಗ್ರಹ ಮಟ್ಟ 124.8 ಅಡಿ. ಈ ಬಾರಿ ಉತ್ತಮ ಮುಂಗಾರಿನ ನಿರೀಕ್ಷೆಯಿದ್ದು , ಜಲಾಶಯ ಭರ್ತಿಯಾಗಬಹುದೆಂದು ಸ್ಥಳೀಯ ಆಡಳಿತ ನಿರೀಕ್ಷಿಸಿದೆ.
ಹೆಗ್ಗಡದೇವನ ಕೋಟೆ ಆಸುಪಾಸಿನಲ್ಲೂ ಒಳ್ಳೆಯ ಮಳೆಯಾಗುತ್ತಿದ್ದು , ಕಬಿನಿ ಜಲಾಶಯದ ಒಳ ಹರಿವು ಕೂಡ ಸುಧಾರಿಸಿದೆ.
ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದೆಡೆಗಳಲ್ಲಿ ಕೂಡ ಭಾರೀ ಮಳೆ ಸುರಿಯುತ್ತಿದ್ದು , ಜಲಮೂಲಗಳಲ್ಲಿ ಉತ್ಸಾಹ ಕಾಣಿಸಿಕೊಂಡಿದೆ. ಜಲಪಾತಗಳು ಭೋರ್ಗರೆಯುತ್ತಿದ್ದು , ನದಿಗಳಲ್ಲಿ ಉಕ್ಕು ಕಾಣಿಸಿಕೊಂಡಿದೆ. ನೂರಾರು ಮರಗಳು ಉರುಳಿಬಿದ್ದು ಕೆಲವೆಡೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಿದ್ಯುತ್ ಪೂರೈಕೆಗೂ ಧಕ್ಕೆ ಉಂಟಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications