ಕೃಷ್ಣ ಕೈತಪ್ಪಿದ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಪದವಿ
ಕೃಷ್ಣ ಕೈತಪ್ಪಿದ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಪದವಿ
ಮ.ಪ್ರ. ಮಾಜಿ ಮುಖ್ಯ ಮಂತ್ರಿ ದಿಗ್ವಿಜಯ ಸಿಂಗ್ ನೇಮಕಾತಿ ಸಂಭವ
ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೂನ್ 15 ಮಂಗಳವಾರ ನಡೆದ ಕೇಂದ್ರಸಂಪುಟ ಸಚಿವರ ಸಭೆಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಭಾಗವಹಿಸಿದರು. ಇದರಿಂದ ಅವರು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎಸ್.ಎಂ. ಕೃಷ್ಣ ಮತ್ತು ದಿಗ್ವಿಜಯಸಿಂಗ್ ಅವರ ನಡುವೆ ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿಯಿತ್ತು. ಈ ನಡುವೆ ಆರ್ಥಿಕ ತಜ್ಞ ಅರ್ಜುನ್‌ಸೇನ್‌ಗುಪ್ತ ಅವರ ಹೆಸರು ಕೇಳಿ ಬಂದಿತ್ತು. ಎನ್‌ಡಿಎ ಆಡಳಿತ ಸಂದರ್ಭದಲ್ಲಿ ಕೆ.ಸಿ.ಪಂತ್ ಅಧಿಕಾರದಲ್ಲಿದ್ದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications