ಪರಿಷತ್‌ನಲ್ಲಿ ಅಲ್ಲಕಲ್ಲೋಲ; ಪ್ರತಿಪಕ್ಷದ ಪಾಲಿಗೆ‘ಅಕ್ಕಿ-ಗೋಧಿ’ ಬೆಲ್ಲ!
ಪರಿಷತ್‌ನಲ್ಲಿ ಅಲ್ಲಕಲ್ಲೋಲ; ಪ್ರತಿಪಕ್ಷದ ಪಾಲಿಗೆ‘ಅಕ್ಕಿ-ಗೋಧಿ’ ಬೆಲ್ಲ!
ಸಿಒಡಿ ತನಿಖಾ ವರದಿಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ-ಖರ್ಗೆ
ಜನ ಸಾಮಾನ್ಯರಿಗೆ ಪಡಿತರದ ಮೂಲಕ ಸೇರಬೇಕಾಗಿದ್ದ ಆಹಾರ ಧಾನ್ಯಗಳು ಕಾಳಸಂತೆಯಲ್ಲಿ ಪ್ರತ್ಯಕ್ಷವಾದ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ ಪ್ರತಿಪಕ್ಷಗಳು, ಪ್ರಕರಣದ ಬಗೆಗೆ ಸಮಗ್ರ ತನಿಖೆಗೆ ಆಗ್ರಹಿಸಿದವು. ಈ ಪ್ರಕರಣಗಳಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ವ್ಯಾಪಾರಿಗಳು ಷಾಮೀಲಾಗಿದ್ದಾರೆಂದು ಜೆಡಿಎಸ್‌ನ ಬಸವರಾಜ ಬೊಮ್ಮಾಯಿ ಆಪಾದಿಸಿದರು.
ಪ್ರತಿಪಕ್ಷಗಳ ಆಕ್ರೋಶಭರಿತ ದಾಳಿಗೆ ಪ್ರತಿಕ್ರಿಯಿಸಿದ ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ- ಪ್ರಕರಣದ ಕುರಿತು ಯಾವುದೊಂದನ್ನೂ ಮುಚ್ಚಿಡಲು ಸರ್ಕಾರ ಬಯಸುವುದಿಲ್ಲ . ಬರ ಪರಿಹಾರ ಕಾಮಗಾರಿಯ ಗೋಧಿ ಹಾಗೂ ರಫ್ತಾಗಲು ಸಂಗ್ರಹಿಸಿದ್ದ ಅಕ್ಕಿಯ ಪ್ರಕರಣಗಳ ಕುರಿತು ಸಿಒಡಿ ತನಿಖೆಗೆ ಸರ್ಕಾರ ಈಗಾಗಲೇ ಆದೇಶಿಸಿದೆ. ಸಿಒಡಿ ತನಿಖಾ ವರದಿಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು.
ಸದನದಲ್ಲಿ ಸೌಹಾರ್ದ ವಾತಾವರಣವನ್ನು ಕಾಯ್ದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದನದ ನಾಯಕರೂ ಆದ ಸಚಿವ ಮಲ್ಲಿಕಾರ್ಜುನ ಖರ್ಗೆ ಸದಸ್ಯರಲ್ಲಿ ಮನವಿ ಮಾಡಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications