ಪಡಿತರ ಗೋಧಿ ಪಾಪಿ ಪಾಲು ! ಹಗರಣದಿ ಪ್ರಭಾವಿಗಳ ಷಾಮೀಲು?

ಪಡಿತರ ಗೋಧಿ ಪಾಪಿ ಪಾಲು ! ಹಗರಣದಿ ಪ್ರಭಾವಿಗಳ ಷಾಮೀಲು?
ಮೂವರ ಬಂಧನ, 903 ಕ್ವಿಂಟಾಲ್‌ ಗೋಧಿ ವಶ

ಬೆಂಗಳೂರು : ಬಡಬಗ್ಗರ ತುತ್ತಿನ ಚೀಲ ಸೇರಬೇಕಾಗಿದ್ದ ಕೋಟ್ಯಾಂತರ ರುಪಾಯಿ ಮೌಲ್ಯದ ಅಕ್ಕಿ ಮಂಗಳೂರಿನ ಖಾಸಗಿ ಗೋದಾಮುಗಳಲ್ಲಿ ಪತ್ತೆಯಾದ ಭಾರೀ ಹಗರಣದ ಕಾವು ಆರುವ ಮುನ್ನವೇ, ಪಡಿತರ ಪದ್ಧತಿ ಮೂಲಕ ಜನ ಸಾಮಾನ್ಯರಿಗೆ ವಿತರಣೆಯಾಗಬೇಕಿದ್ದ ಗೋಧಿ ಬೆಂಗಳೂರಿನ ಖಾಸಗಿ ಗಿರಣಿಯಲ್ಲಿ ಪತ್ತೆಯಾಗಿದೆ.

903 ಕ್ವಿಂಟಾಲ್‌ ಪಡಿತರ ಗೋಧಿಯನ್ನು ಬೆಂಗಳೂರಿನ ಗಿರಣಿಯಾಂದರಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಅಧಿಕಾರಿಗಳು ವಶಪಡಿಸಿಕೊಂಡಿದ್ದು , ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಭಾನುವಾರ ಎಚ್ಚರಿಸಿದ್ದಾರೆ. ಪ್ರಕರಣದ ಕುರಿತು ಸಿಸಿಬಿ ವರದಿಯನ್ನು ನಿರೀಕ್ಷಿಸುತ್ತಿದ್ದು , ವರದಿ ಬಂದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಹೊಸೂರು ರಸ್ತೆಯ ಕೂಡ್ಲು ಗೇಟ್‌ ಸಮೀಪದ ಚಾಮುಂಡೇಶ್ವರಿ ರೋಲರ್‌ ಫ್ಲೋರ್‌ಮಿಲ್‌ನಲ್ಲಿ ಅಕ್ರಮ ಗೋಧಿ ದಾಸ್ತಾನು ಪತ್ತೆಯಾಗಿದ್ದು , ಈ ಗೋಧಿಯನ್ನು ರವೆ ಮಾಡಲಿಕ್ಕಾಗಿ ಗಿರಣಿಗೆ ತರಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಏಳು ಲಾರಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಲಾರಿಗಳ ಮಾಲಿಕರು ಯಾರೆಂಬುದು ಪತ್ತೆಯಾಗಿಲ್ಲ . ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಣಿ ಒಡೆಯ ಮಹೇಂದ್ರ ಗುಪ್ತಾ , ಪ್ರಭಾಕರ್‌ ಹಾಗೂ ಸಲೀಂ ಪಾಷ ಎನ್ನುವವರನ್ನು ಬಂಧಿಸಲಾಗಿದೆ.

ಅಂದಹಾಗೆ, ಅಕ್ರಮ ಗೋಧಿ ದಾಸ್ತಾನಿನ ಮೇಲಿನ ದಾಳಿ ಮೇ ತಿಂಗಳ 21ರಂದೇ ನಡೆದಿದೆ. ಆದರೆ ದಾಳಿಯ ಬಗೆಗಿನ ವಿವರಗಳು ಬೆಳಕಿಗೆ ಬಂದಿರುವುದು ಜೂನ್‌ 13ರ ಭಾನುವಾರ. ಈ ಪ್ರಕರಣದಲ್ಲಿ ಪ್ರಭಾವಿ ಸಚಿವರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಯಡಿಯೂರಪ್ಪ ಆಪಾದಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+