ತಮಿಳುನಾಡಿಗೆ ತೊಟ್ಟು ನೀರೂ ಬಿಡೊಲ್ಲ : ಧರ್ಮಸಿಂಗ್ ಅಚಲ ನುಡಿ
ತಮಿಳುನಾಡಿಗೆ ತೊಟ್ಟು ನೀರೂ ಬಿಡೊಲ್ಲ : ಧರ್ಮಸಿಂಗ್ ಅಚಲ ನುಡಿ
ಜೂ.15-16ರಂದು ರಾಜ್ಯಕ್ಕೆ ತಮಿಳುನಾಡಿನ ನಿಯೋಗ
ರಾಜ್ಯ ಹಾಗೂ ರಾಜ್ಯದ ರೈತರ ಹಿತಾಸಕ್ತಿ ರಕ್ಷಿಸುವ ವಿಷಯದಲ್ಲಿ ಯಾವುದೇ ರಾಜಿಗೆ ಸರ್ಕಾರ ಸಿದ್ಧವಿಲ್ಲ . ತಮಿಳುನಾಡಿಗೆ ಒಂದು ತೊಟ್ಟು ಕಾವೇರಿ ನೀರು ಬಿಡುಗಡೆ ಮಾಡುವ ಪ್ರಸ್ತಾವನೆಯೂ ನಮ್ಮ ಮುಂದಿಲ್ಲ ಎಂದು ಸೋಮವಾರ (ಜೂನ್ 14) ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಹೇಳಿದರು. ಕಾವೇರಿ ನೀರು ಬಿಡುಗಡೆ ಸಂಬಂಧ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಹಾಗೂ ಮತ್ತಿತರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧರ್ಮಸಿಂಗ್, ಈ ಸಂಬಂಧ ಸರ್ಕಾರದ ನಿಲುವು ಅಚಲ ಎಂದು ಸ್ಪಷ್ಟಪಡಿಸಿದರು.
ಜೂನ್ 15-16ರಂದು ನೀರು ಬಿಡುಗಡೆ ಮಾಡುವಂತೆ ಕೇಳಲು ತಮಿಳುನಾಡಿನ ಅಧಿಕೃತ ನಿಯೋಗ ರಾಜ್ಯಕ್ಕೆ ಭೇಟಿ ನೀಡಲಿದೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಫ್ಯಾಕ್ಸ್ ಮೂಲಕ ತಿಳಿಸಿದ್ದಾರೆ. ಆದರೆ ನೀರು ಬಿಡುಗಡೆ ಸಂಬಂಧ ಯಾವುದೇ ಬದ್ಧತೆಗೆ ರಾಜ್ಯ ಸರ್ಕಾರ ಒಳಗಾಗಿಲ್ಲ . ಈ ಕುರಿತು ಕೇಂದ್ರ ಒತ್ತಡ ಹೇರುವ ಸಾಧ್ಯತೆಯೂ ಇಲ್ಲ ಎಂದು ಧರ್ಮಸಿಂಗ್ ಹೇಳಿದರು.
(ಪಿಟಿಐ)
ಮುಖಪುಟ / ಕಾವೇರಿ












Click it and Unblock the Notifications