100ಕ್ಕೂ ಹೆಚ್ಚು ಬಾಲಕಾರ್ಮಿಕರ ಮೊಗದಲ್ಲಿ ಭವಿಷ್ಯದ ಬಗೆಗೆ ಹೊಸ ಕಳೆ
100ಕ್ಕೂ ಹೆಚ್ಚು ಬಾಲಕಾರ್ಮಿಕರ ಮೊಗದಲ್ಲಿ ಭವಿಷ್ಯದ ಬಗೆಗೆ ಹೊಸ ಕಳೆ
ನಿಷ್ಠಾವಂತ ಅಧಿಕಾರಿ ಡಿ.ಎಸ್.ಪಿ. ರವಿನಾರಾಯಣ್‌ಗೆ ‘ಮಕ್ಕಳ ಮಿತ್ರ’
ದಾವಣಗೆರೆ ಜಿಲ್ಲೆಯಲ್ಲಿ ಹೊಟೇಲುಗಳು, ಗ್ಯಾರೇಜು, ಅಕ್ಕಸಾಲಿಗರ ಅಂಗಡಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 100ಕ್ಕೂ ಹೆಚ್ಚಿನ ಮಕ್ಕಳನ್ನು ರವಿನಾರಾಯಣ್ ಅವರು ಹುಡುಕಿ ತೆಗೆದಿದ್ದಾರೆ. ಅವರ ಈ ನಿಷ್ಠಾವಂತ ಸೇವೆಯನ್ನು ಕಂಡು ಸರ್ಕಾರ ಅವರಿಗೆ ‘ಮಕ್ಕಳ ಮಿತ್ರ’ ಪ್ರಶಸ್ತಿಯನ್ನು ಕೊಡಲು ನಿರ್ಧರಿಸಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರವಿನಾರಾಯಣ್ ಅವರು ಪತ್ತೆ ಹಚ್ಚಿದ ಬಹುತೇಕ ಬಾಲಕಾರ್ಮಿಕರನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಿಂದ ಕರೆತರಲಾಗಿದೆಯೆಂದು ತಿಳಿದು ಬಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ(ಜೂನ್ 12ರಂದು) ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಶಸ್ತಿಯು ರೂಪಾಯಿ ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದ್ದು ಮುಖ್ಯಮಂತ್ರಿ ಧರ್ಮ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications