Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಲಿಂಗಾಯಿತ ವಧು-ವರರ ಸಮಾವೇಶ

ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಲಿಂಗಾಯಿತ ವಧು-ವರರ ಸಮಾವೇಶ
ಕರ್ನಾಟಕ ಶಿವಶರಣ ಸೇವಾ ಸಮಿತಿ ಆಶ್ರಯದಲ್ಲಿ ಭಗೀರಥ ವೈವಾಹಿಕ ಮಾಹಿತಿ ಕೇಂದ್ರ ಮತ್ತು www.bharathjobs.com ಜಂಟಿ ಆಶ್ರಯದಲ್ಲಿ ವಧು-ವರರ ಸಮಾವೇಶ.

ಬೆಂಗಳೂರು: ಮದುವೆ ಎಂಬುದು ಒಂದು ಪವಿತ್ರ ಬಂಧ. ಮೂರು ಗಂಟು ಕಟ್ಟಿ, ವಧು ವರರಿಬ್ಬರೂ ಸಪ್ತಪದಿ ತುಳಿದು, ಕಾಯಾ, ವಾಚಾ, ಮನಸಾ ಕೈ ಹಿಡಿದವಳ ಜೊತೆಗೇ ಹೊಂದಿಕೊಂಡು ಬಾಳ್ವೆ ನಡೆಸುವುದಾಗಿ ವಧುವರರಿಬ್ಬರೂ ಸ್ವೀಕರಿಸುವ ಪ್ರತಿಜ್ಞಾ ವಿಧಿ ಎಂದರೂ ತಪ್ಪಾಗಲಾರದೇನೋ.

ಮದುಮಗ ಧರ್ಮೇಚ.. ಅರ್ಥೇಚ.. ನಾತೇಚರಾಮಿ.. ಎಂಬ ಮಂತ್ರಗಳನ್ನು ಪಠಿಸಿ, ಆಗಮಿಸಿದ ಬಂಧು ಬಳಗಗಳಿಗೆ ಉಣಬಡಿಸಿ ಲಕ್ಷಗಟ್ಟಲೆ ಖರ್ಚು ಮಾಡಿ, ಹೊಸ ಜೀವನದ ಹಾದಿಯ ಮೊದಲ ಹೆಜ್ಜೆಯಿಡುವ ಕಾಲ ಬದಲಾಗುತ್ತಿದೆ.

ಇದು ಕಲಿಯುಗ. ಇಲ್ಲಿ ಎಲ್ಲವೂ ಸರಳ. ಆದರೂ ಶಾಸ್ತ್ರೋಕ್ತವಾಗಿ ನಡೆಯಬೇಕು. ಸಂಪ್ರದಾಯದ ಕಂಪು ಇದ್ದರೆ, ಅದರ ಸೊಗಡೇ ಬೇರೆ ಎಂಬ ತತ್ವವನ್ನು ನಂಬಿರುವ ಕರ್ನಾಟಕ ಶಿವಶರಣ ಸೇವಾ ಸಮಿತಿ ಆಶ್ರಯದಲ್ಲಿ ಭಗೀರಥ ವೈವಾಹಿಕ ಮಾಹಿತಿ ಕೇಂದ್ರ ಮತ್ತು www.bharathjobs.com ಜಂಟಿ ಆಶ್ರಯದಲ್ಲಿ ಪ್ರತಿದಿನ ರಾಜ್ಯಮಟ್ಟದ(ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಮತ್ತು ಹಳೆ ಮೈಸೂರು ಪ್ರಾಂತ್ಯದ) ವೀರಶೈವ ಮತ್ತು ಲಿಂಗಾಯಿತ ಸಮಾಜದ ವಧುವರರ ಮಾಹಿತಿಯನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ.

ಜೂನ್‌ 20ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಮೆಜೆಸ್ಟಿಕ್‌ನ ಕೆ.ಜಿ. ರಸ್ತೆಯಲ್ಲಿರುವ ಅಲಂಕಾರ್‌ ಪ್ಲಾಜಾ, 2ನೇ ಮಹಡಿಯಲ್ಲಿರುವ ಭಾರತ್‌ ಸರ್ವೀಸಸ್‌ ಸಭಾಭವನದಲ್ಲಿ ರಾಜ್ಯಮಟ್ಟದ ಲಿಂಗಾಯಿತ ವಧು-ವರರ ಸಮಾವೇಶವನ್ನು ಏರ್ಪಡಿಸಲಾಗಿದೆ. ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ಮಾರ್ಗದರ್ಶನವನ್ನೂ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ವೀರಶೈವ ಮತ್ತು ಲಿಂಗಾಯಿತರ ಎಲ್ಲ ಒಳಪಂಗಡದ ವಧು-ವರರು ಮತ್ತು ನಿರುದ್ಯೋಗಿಗಳು ತಮ್ಮ ಭಾವಚಿತ್ರ ಮತ್ತು ಸಂಪೂರ್ಣ ವಿವರಗಳೊಂದಿಗೆ ಸಂಪರ್ಕಿಸಬಹುದು. ಸಂಪರ್ಕಿಸಬೇಕಾದ ಸಮಯ: ಬೆಳಿಗ್ಗೆ 9ರಿಂದ ಸಂಜೆ 8ರ ವರೆಗೆ.

ಸಂಪರ್ಕಿಸಬೇಕಾದ ವಿಳಾಸ:
ನಂ. 421/422, ಆರಾಧನಾ ಸೆಂಟರ್‌
1ನೇ ಮಹಡಿ, ಅಲಂಕಾರ್‌ ಪ್ಲಾಜಾ,
ಕೆಂಪೇಗೌಡ ರಸ್ತೆ, ಮೆಜೆಸ್ಟಿಕ್‌,
ಬೆಂಗಳೂರು-560 009.
ದೂರವಾಣಿ: 080-22080151, 22080161, 51220651, 51220653

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+