‘ಕುರುವೈ ಬೆಳೆಗೆ ಕಾವೇರಿ ನೀರು ಬಿಡಿ’: ತ.ನಾ. ನಿಯೋಗದ ನಿವೇದನೆ
‘ಕುರುವೈ ಬೆಳೆಗೆ ಕಾವೇರಿ ನೀರು ಬಿಡಿ’: ತ.ನಾ. ನಿಯೋಗದ ನಿವೇದನೆ
ಮುರುಗನ್‌ನೇತೃತ್ವದ ತ.ನಾ. ನಿಯೋಗದಿಂದ ರಾಜ್ಯಕ್ಕೆ ಮನವಿ
ಏಳು ಮಂದಿಯ ಈ ನಿಯೋಗವು ಮುಖ್ಯಮಂತ್ರಿ ಧರ್ಮಸಿಂಗ್, ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ರಾಜ್ಯ ನೀರಾವರಿ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಮಾತುಕತೆ ನಡೆಸಿ ಲಿಖಿತ ಮನವಿ ನೀಡಿದೆ.
ಮಾತುಕತೆಯ ಬಳಿಕ ಪತ್ರಕರ್ತರಲ್ಲಿ ಮಾತನಾಡಿದ ಧರ್ಮ ಸಿಂಗ್ ನಾವು ಅವರ ನಿವೇದನೆಯನ್ನು ತಾಳ್ಮೆಯಿಂದ ಆಲಿಸಿದ್ದೇವೆ. ಆದರೆ ಯಾವುದೇ ಭರವಸೆಗಳನ್ನು ನೀಡಲಿಲ್ಲ. ಈಗ ಸದನದ ಸಮಾವೇಶ ನಡೆಯುತ್ತಿದೆ. ಆದ್ದರಿದ ಅಲ್ಲೇ ಈ ವಿಷಯ ಚರ್ಚಿಸಿ ನಿರ್ಣಯ ಕೈಗ್ಗೊಳ್ಳುತ್ತೇವೆ ಎಂದು ಹೇಳಿದರು.
ನಾವು ಕೇಂದ್ರದ ವರದಿಗಾಗಿ ಕಾಯುತ್ತಿದ್ದೇವೆ. ಜಲಾಶಯಗಳಿಗೆ ಭೇಟಿ ನೀಡಿದ ವಸಿಷ್ಠ ನೇತೃತ್ವ ತಂಡದ ವರದಿ ಹಾಗೂ ತಮಿಳುನಾಡಿನ ವಾಸ್ತವ ಪರಿಸ್ಥಿತಿಯನ್ನು ಈ ಸಂದರ್ಭದಲ್ಲಿ ಅವಲೋಕಿಸಬೇಕಾಗಿದೆ ಎಂದು ಹೇಳಿದರು.
ಅನುಕಂಪದ ಆಧಾರದಲ್ಲಿ ನಮ್ಮ ಮನವಿಯನ್ನು ಪರಿಶೀಲಿಸುವ ಭರವಸೆಯನ್ನು ಕರ್ನಾಟಕ ನೀಡಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಮುರುಗನ್ ಹೇಳಿದರು.
ಕಾವೇರಿ ಪ್ರಾಧಿಕಾರ ಸಭೆ ಕರೆಯುವ ಕುರಿತು ಪ್ರತಿಕ್ರಿಯೆ ನೀಡಲಿಚ್ಚಿಸದ ಅವರು ನಾವು ಕಷ್ಟದಲ್ಲಿರುವ ರೈತರಿಗಾಗಿ ಇಷ್ಟೆಲ್ಲಾ ಮಾಡುತ್ತಿದ್ದೇವೆ. ಅವರು ಕುರುವೈಬೆಳೆ ಬೆಳೆಯಬೇಕೆಂಬುದು ನಮ್ಮ ಆಶಯ ಎಂದು ಉತ್ತರಿಸಿದರು.
(ಪಿಟಿಐ)
ಮುಖಪುಟ / ಕಾವೇರಿ












Click it and Unblock the Notifications