ಕಾವೇರಿ ಹಂಚಿಕೆ ಕುರಿತು ಕೇಂದ್ರ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ
ಕಾವೇರಿ ಹಂಚಿಕೆ ಕುರಿತು ಕೇಂದ್ರ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ
ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಮೊದಲಿನಿಂದಲೂ ರಾಜ್ಯದ ನಿಲುವು ಒಂದೇ: ಧರ್ಮಸಿಂಗ್
ಜೂನ್ 8ಅರಂದು ಕರೆಯಲಾಗಿದ್ದ ಕಾವೇರಿ ಹಾಗೂ ಸಿಇಟಿ ಬಗ್ಗೆ ನಡೆದ ಚರ್ಚೆ ಯತುರ್ತು ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧ್ಯಾ ಅವರು ಈ ವಿಷಯ ಸ್ಪಷ್ಟಪಡಿಸಿದರು. ಕಾವೇರಿ ಕಣಿವೆ ಜಲಾಶಯಗಳಲ್ಲಿ ಸಂಗ್ರಹವಾದ ನೀರಿನ ಪ್ರಮಾಣ ಕಳೆದ ವರ್ಷಕ್ಕಿಂತ 5% ಹೆಚ್ಚಿರಬಹುದು. ಆದರೆ ಈಗ ಆ ಪ್ರದೇಶದ ರೈತರೇ ತುಂಬ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಿಲುನಾಡಿಗೆ ನೀರು ಬಿಡುವ ಬಗ್ಗೆ ಯೋಚಿಸುವುದೂ ತಪ್ಪು ಎಂದು ಸಿಂಧ್ಯಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿ ಧರ್ಮಸಿಂಗ್ ಅವರು ಕೇಂದ್ರದ ಗಮನಕ್ಕೆ ತಂದಿದ್ದಾರೆ. ಇದುವರೆಗ ಕೇಂದ್ರದಿಂದ ಯಾವುದೇ ಸ್ಪಷ್ಟ ಸೂಚನೆ ಬಂದಿಲ್ಲ. ಒಂದು ಪಕ್ಷ ಅಂಥಹ ಪರಿಸ್ಥಿತಿ ಎದುರಾದರೂ ಸರ್ವ ಪಕ್ಷಗಳ ಸಭೆ ಕರೆದು, ಎಲ್ಲರ ಸಲಹೆಯ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಧರ್ಮಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಮೊದಲಿನಿಂದಲೂ ರಾಜ್ಯವು ಒಂದೇ ನಿಲುವನ್ನು ಪ್ರತಿಪಾದಿಸಿಕೊಂಡು ಬಂದಿದೆ. ಮುಂದೆಯೂ ಅದೇ ನಿರ್ಣಯ ಮುಂದುವರಿಯಲಿದೆ. ಈ ವಿಷಯದಲ್ಲಿ ಸರ್ವ ಪಕ್ಷಗಳೂ ಸರಕಾರದೊಂದಿಗೆ ಸಹಕರಿಸುತ್ತವೆಂಬ ವಿಶ್ವಾಸ ನಮಗಿದೆ ಎಂದು ಧರ್ಮಸಿಂಗ್ ತಮ್ಮ ನಿಲುವನ್ನು ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ












Click it and Unblock the Notifications