ಸಾಹಿತ್ಯ ಪರಿಷತ್ತಿನಲ್ಲಿ ಕುವೆಂಪು , ಪುತಿನರವರ ಕಾವ್ಯ-ಮಾಧುರ್ಯ
ಸಾಹಿತ್ಯ ಪರಿಷತ್ತಿನಲ್ಲಿ ಕುವೆಂಪು , ಪುತಿನರವರ ಕಾವ್ಯ-ಮಾಧುರ್ಯ
ಕುವೆಂಪು, ಪುತಿನ ಹಾಡಗಬ್ಬ ; ಇದು ಹೊಂಬಾಳೆಯ ‘ಕಾವ್ಯರ್ಷಿ ವಂದನಾ’ಕುವೆಂಪು ಮತ್ತು ಪುತಿನರವರ ಶತಮಾನ ಸ್ಮರಣೆಯ ಅಂಗವಾಗಿ, ಎಚ್. ಫಲ್ಗುಣ ಅವರ ನೇತ್ರತ್ವದಲ್ಲಿ ಹೊಂಬಾಳೆ ಪ್ರತಿಭಾರಂಗ(ರಿ)ವು ‘ಕಾವ್ಯರ್ಷಿ ವಂದನಾ’ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಎಲ್ಲರನ್ನೂ ಹೃತ್ಪೂರ್ವಕವಾಗಿ ಆಮಂತ್ರಿಸಲಾಗುತ್ತಿದೆ. ಸರ್ವರಿಗೂ ಸುಸ್ವಾಗತ.
ಈ ನಿಟ್ಟಿನಲ್ಲಿ ಸುಗಮಸಂಗೀತ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ಹೊಂಬಾಳೆ ಪ್ರತಿಭಾ ರಂಗ ಸಂಸ್ತೆ ದಿನಾಂಕ 12-06-2004 ರ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯರ್ಷಿ ವಂದನಾ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕುವೆಂಪು ಮತ್ತು ಪುತಿನ ಶತಮಾನ ಸ್ಮರಣೆಯ ಗಾಯನ ಕಾರ್ಯಕ್ರಮದಲ್ಲಿ ಅಂದು ಈ ಕೆಳಗಿನ ಹಿರಿಯ-ಕಿರಿಯ ಸುಗಮಸಂಗೀತ ಹಾಡುಗಾರರು ಕುವೆಂಪು ಮತ್ತು ಪುತಿನ ಅವರ ಕವನಗಳನು ಹಾಡುವುದರ ಮೂಲಕ ಗೀತನಮನ ಸಲ್ಲಿಸಲಿದ್ದಾರೆ.
ಕುವೆಂಪು ಗೀತ ನಮನ
ಶಿವಮೊಗ್ಗ ಸುಬ್ಬಣ್ಣ, ಬಿ.ಕೆ. ಸುಮಿತ್ರಾ, ಯಶವಂತ ಹಳಿಬಂಡಿ, ವೈ.ಕೆ. ಮುದ್ದುಕೃಷ್ಣ, ನರಸಿಂಹ ನಾಯಕ್, ಅಪ್ಪಗೆರೆ ತಿಮ್ಮರಾಜು, ಕಿಕ್ಕೇರಿ ಕೃಷ್ಣಮೂರ್ತಿ, ಸಿ.ಎಸ್. ನಂದಿತಾ, ಶಮಿತಾ ಮಲ್ನಾಡ್, ಎಚ್.ಆರ್.ಕೆ. ಪ್ರಸಾದ್, ಭಾಗ್ಯ ವಿ. ರಾವ್, ಟಿ. ಗೊಪಾಲಕೃಷ್ಣ.
ಪುತಿನ ಗೀತ ನಮನ
ಶ್ರೀನಿವಾಸ ಉಡುಪ, ಚಂದ್ರಿಕಾ ಗುರುರಾಜ್, ಕೆ.ಎಸ್. ಸುರೇಖಾ, ಶಂಕರ್ ಶಾನುಭಾಗ್, ಮಂಜುಳಾ ಪರಮೇಶ್, ಎಸ್. ಸುನೀತಾ, ಅರ್ಚನಾ ಉಡುಪ, ವೃಂದಾ ಎಸ್. ರಾವ್, ಎಂ. ಲಕ್ಷ್ಮೀಕಾಂಟ, ಚಂದ್ರಿಕಾ ಬದರೀನಾಥ್, ಎಂ,ಎಸ್, ಶ್ರೀಕೃಷ್ಣ, ಶ್ರೀರಕ್ಷಾ ಅರವಿಂದ್.
ಎನ್.ಎಸ್. ಪ್ರಸಾದ್, ಬಿ.ವಿ ಶ್ರೀನಿವಾಸ್, ಎಂ.ಬಿ. ಶಶಿಧರ, ಟಿ. ಲಕ್ಷ್ಮೀಪತಿ, ಪ್ರದ್ಯುಂನ, ಎಂ.ವಿ. ಕೃಷ್ಣ, ಮುಂತಾದವರು ಹಾಡುಗಾರರಿಗೆ ವಾದ್ಯ ಸಹಕಾರ ನೀಡಲಿದ್ದಾರೆ. ರಂಯ ಕಲ್ಚರಲ್ ಅಕಾಡೆಮಿ, ಆದರ್ಶ ಸುಗಮ ಸಂಗೀತ ಅಕಾಡೆಮಿ ಮತ್ತು ಲಹರಿ ರೆಕಾರ್ಡಿಂಗ್ ಕಂ. ಪ್ರೈ.ಲಿ., ಸಂಸ್ಥೆಗಳು ಕಾವ್ಯರ್ಷಿ ವಂದನಾ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ.
ದಿನಾಂಕ: 12-06-2004 ರ ಶನಿವಾರ
ಸಮಯ: ಸಂಜೆ 6 ಗಂಟೆಗೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು,
ಚಾಮರಾಜಪೇಟೆ, ಬೆಂಗಳೂರು- 560 018.
ಹೆಚ್ಚಿನ ಮಾಹಿತಿಗಾಗಿ :
21, ದಿವ್ಯ, 1ನೇ ಮಹಡಿ,
ಮದ್ದೂರಮ್ಮ ಗುಡಿ ರಸ್ತೆ,
ಪೈಪ್‌ಲೈನ್, ಶ್ರೀನಗರ,
ಬೆಂಗಳೂರು-560 050.
ದೂರವಾಣಿ: 26529303
ಸಂಚಾರಿ: 94480 87887,
ಈ ಪತ್ರ: [email protected]
ಮುಖಪುಟ / ವಾರ್ತೆಗಳು












Click it and Unblock the Notifications