ಸದ್ಯ ಕಾವೇರಿ ಪ್ರಾಧಿಕಾರ ಸಭೆ ಕರೆಯುವು ಅಗತ್ಯವಿಲ್ಲ: ಧರ್ಮಸಿಂಗ್‌

ಸದ್ಯ ಕಾವೇರಿ ಪ್ರಾಧಿಕಾರ ಸಭೆ ಕರೆಯುವು ಅಗತ್ಯವಿಲ್ಲ: ಧರ್ಮಸಿಂಗ್‌
ಪರಿಸ್ಥಿತಿ ಪರಿಶೀಲಿಸಲು ಕೇಂದ್ರದಿಂದ ತ್ರಿಸದಸ್ಯ ತಂಡದ ಭೇಟಿ

ಬೆಂಗಳೂರು : ಈ ಸಂದಿಗ್ಧ ಪರಿಸ್ಥಿಯಲ್ಲಿ ಕಾವೇರಿ ಪ್ರಾಧಿಕಾರದ ಸಭೆ ಕರೆಯುವು ಅಗತ್ಯವಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್‌ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ಗೆ ತಿಳಿಸಿದ್ದಾರೆ. ಜೂನ್‌10ರ ಗುರುವಾರ ತಮಿಳುನಾಡು ನಿಯೋಗವೊಂದು ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಯಲ್ಲಿ ಈ ಸಂದೇಶ ಮಹತ್ವ ಪಡೆದಿದೆ.

ಫೋನ್‌ ಮೂಲಕ ಮಾತನಾಡಿರುವುದಲ್ಲದೆ, ಪತ್ರದ ಮೂಲಕವೂ ಪ್ರಧಾನಿಯವರಿಗೆ ತಿಳಿಸಲಾಗಿದೆ. ಪತ್ರದಲ್ಲಿ ಕಾವೇರಿ ಜಲಾಶಯದಲ್ಲಿರುವ ನೀರಿನ ಮಟ್ಟ ಮತ್ತು ರಾಜ್ಯ ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿವರಿಸಲಾಗಿದೆ ಎಂದು ಮುಖ್ಯಮಂತ್ರಿ ಪತ್ರಕರ್ತರಿಗೆ ತಿಳಿಸಿದರು..

ರಾಜ್ಯದ ಕೆಲವೆಡೆ ಮಳೆಯಾದರೂ ಕಾವೇರಿಯ ನಾಲ್ಕು ಜಲಾಶಯದಲ್ಲಿ ನೀರಿನ ಮಟ್ಟ ಕನಿಷ್ಠವಾಗಿಯೇ ಇದೆ. ಇದಕ್ಕೆ ಎರಡು ವರ್ಷ ಮಳೆ ಬಾರದಿರುವುದು ಕಾರಣ ಎಂದು ಹೇಳಿದರು.

ಮುಖ್ಯಅಭ್ಯಂತರ ವಸಿಷ್ಠ ನೇತೃತ್ವದಲ್ಲಿ ಕೇಂದ್ರ ಜಲ ಮಂಡಳಿ ಆಯೋಗದ ತ್ರಿಸದಸ್ಯ ತಂಡವು ಈ ನಾಲ್ಕು ಜಲಾಶಯಗಳಿಗೆ ಭೇಟಿ ನೀಡಲಿದೆ. ಬಳಿಕ ರಾಜ್ಯ ನೀರಾವರಿ ಇಲಾಖೆ ಜೊತೆ ಚರ್ಚಿಸಿ ಪ್ರಧಾನ ಮಂತ್ರಿಯವರಿಗೆ ವರದಿ ಒಪ್ಪಿಸಲಿದೆ. ಸದ್ಯದಲ್ಲಿಯೇ ನಾವು ರಾಜ್ಯದ ಸರ್ವ ಪಕ್ಷ ಸಭೆ ಕರೆದು ಚರ್ಚಿಸುತ್ತೇವೆ ಎಂದು ಹೇಳಿದರು.

ಕಾವೇರಿ ತೀರದ ಕ್ಷೇತ್ರದಿಂದ ಗೆದ್ದು ಬಂದಿರುವ ಉಪಮುಖ್ಯಮಂತ್ರಿ ಸಿದ್ದರಾಮಯ್ಯಅವರ ನಿಯೋಗದ ಬೇಡಿಕೆಗಳನ್ನು ಆಲಿಸಿ ಪರಿಶೀಲಿಸುತ್ತೇವೆ. ಆದರೆ ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

(ಪಿಟಿಐ)

ಮುಖಪುಟ / ಕಾವೇರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+