ಮಾಜಿ ಸಚಿವ ಆರ್‌ವಿ ದೇಶಪಾಂಡೆ ವಿಧಾನಸಭಾ ಹಂಗಾಮಿ ಸಭಾಧ್ಯಕ್ಷ

ಮಾಜಿ ಸಚಿವ ಆರ್‌ವಿ ದೇಶಪಾಂಡೆ ವಿಧಾನಸಭಾ ಹಂಗಾಮಿ ಸಭಾಧ್ಯಕ್ಷ
ಸಚಿವರಾಗಿ ಸೊರಗಿ ಸುಸ್ತಾಗಿದೆ:ದೇಶಪಾಂಡೆ

ಬೆಂಗಳೂರು: ರಾಜಭವನದಲ್ಲಿ ಜೂನ್‌ 6ರಂದು ನಡೆದ ಸಮಾರಂಭದಲ್ಲಿ ಪ್ರಸ್ತುತ ವಿಧಾನ ಸಭೆಯ ಹಿರಿಯ ನಾಯಕ ಆರ್‌. ವಿ. ದೇಶಪಾಂಡೆ ಅವರು ವಿಧಾನಸಭೆಯ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌, ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಪಿ.ಜಿ.ಆರ್‌. ಸಿಂಧ್ಯಾ, ವಿಧಾನ ಪರಿಶತ್ತಿನ ಉಪಸಭಾಪತಿ ಪಿ.ಆರ್‌. ಸುದರ್ಶನ್‌ ಮತ್ತಿತರರು ಪಾಲ್ಗೊಂಡಿದ್ದರು.

ಸಚಿವ ಪದವಿ ಒಲ್ಲೆ: ದೇಶಪಾಂಡೆ

ನಾನು ಎಷ್ಟು ಬಾರಿ ಸಚಿವನಾಗುತ್ತಲೇ ಇರುವುದು? ನಾನು ತುಂಬ ದಣಿದಿರುವೆ. ನನಗೀಗ ವಿಶ್ರಾಂತಿ ಬೇಕಿದೆ. ಈ ಸಲ ಸಚಿವ ಪದವಿ ನನಗೆ ಬೇಕಾಗಿಲ್ಲ ಎಂದು ಜನತಾ ಪಕ್ಷ, ಜನತಾದಳ ಹಾಗೂ ಕಾಂಗ್ರೆಸ್‌ ಸರ್ಕಾರದಲ್ಲಿ ಸತತವಾಗಿ ಶಾಸಕ, ಸಚಿವರಾಗುತ್ತಲೇಬಂದಿರುವ ಹಿರಿಯ ನಾಯಕ ಆರ್‌.ವಿ. ದೇಶಪಾಂಡೆ ಅವರು ಸಚಿವ ಸ್ಥಾನದ ಮೇಲಿನ ತಮ್ಮ ನಿರಾಸಕ್ತಿಯನ್ನು ವ್ಯಕ್ತಪಡಿಸಿದರು. ಅವರು ಪ್ರಮಾಣ ವಚನ ಸ್ವೀಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಜೂನ್‌ 5ರ ಸಂಪುಟ ವಿಸ್ತರಣೆಯಲ್ಲಿ ತಮ್ಮನ್ನು ಸೇರ್ಪಡೆಗೊಳಿಸದೇ ಇರುವ ಬಗ್ಗೆ ಪ್ರಶ್ನಿಸಿದಾಗ, ನನಗೆ ಸಂತೋಷವಾಗಿದೆ. ಈಗ ನನಗೆ ಮುಕ್ತಿ ದೊರೆತಂತೆ ಭಾಸವಾಗುತ್ತಿದೆ. ಕಳೆದ 25 ವರ್ಷಗಳ ಕಾಲ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಸಚಿವ ಸ್ಥಾನವನ್ನು ಕೇಳಿ ಪಡೆಯುವುದು ಸರಿಯಲ್ಲ ಎಂದು ದೇಶಪಾಂಡೆ ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+