ಕಾವೇರಿದ ಸಮಸ್ಯೆ: ಮು.ಮ.ಧರ್ಮಸಂಕಟದ ನಡುವೆ ಅಧಿಕಾರಿಗಳ ಸಭೆ

ಕಾವೇರಿದ ಸಮಸ್ಯೆ: ಮು.ಮ.ಧರ್ಮಸಂಕಟದ ನಡುವೆ ಅಧಿಕಾರಿಗಳ ಸಭೆ
ಜೂನ್‌10ರಂದು ರಾಜ್ಯಕ್ಕೆ ತಮಿಳುನಾಡು ನಿಯೋಗ

ಬೆಂಗಳೂರು: ಕಾವೇರಿ ಪ್ರಾಧಿಕಾರದ ಸಭೆಯನ್ನು ಕೂಡಲೇ ಕರೆಯಬೇಕು ಎಂದು ತಮಿಳುನಾಡು ಒತ್ತಾಯಿಸಿದ ಹಿನ್ನೆಲೆಯಲ್ಲಿ ಒಟ್ಟಾರೆ ಪರಿಸ್ಥಿತಿ ಅವಲೋಕಿಸಲು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಜೂನ್‌7ರ ಸೋಮವಾರ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿಗೆ ಪತ್ರ ಬರೆದಿರುವುದನ್ನು ಗಮನಿಸಿದ್ದೇನೆ. ತಮಿಳುನಾಡಿನಿಂದ ನಿಯೋಗವೊಂದು ದೆಹಲಿಗೆ ತೆರಳಿ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಲಿರುವುದು ತಿಳಿದಿದೆ. ಒಟ್ಟಾರೆ ಸಂಪೂರ್ಣ ಪರಿಸ್ಥಿತಿಯ ಅರಿವಿದೆ. ಈ ಮಧ್ಯೆ ಇದೇ ನಿಯೋಗವು ಜೂ.10ರಂದು ಬೆಂಗಳೂರಿಗೆ ಭೇಟಿ ನೀಡಿದಾಗ ಅವರ ಜೊತೆಗೂ ಚರ್ಚಿಸಲಿದ್ದೇನೆ ಎಂದು ಮುಖ್ಯ ಮಂತ್ರಿಧರ್ಮ ಸಿಂಗ್‌ಹೇಳಿದರು.

ಸಚಿವ ಸಂಪುಟ

ಸಚಿವ ಸಂಪುಟಕ್ಕೆ ಇನ್ನು 22 ಮಂದಿಯನ್ನು ಸೇರಿಸಿಕೊಳ್ಳಲಿದೆ. ವಿಧಾನಸಭಾ ಅಧಿವೇಶನದ ಬಳಿಕ ಒಂದೇ ಬಾರಿಯಲ್ಲಿ ಸಚಿವ ಸಂಪುಟ ವಿಸ್ತರಿಸಲಾಗುವುದು ಎಂದು ಧರ್ಮ ಸಿಂಗ್‌ ಹೇಳಿದರು.

ತಮ್ಮನ್ನು ಭೇಟಿ ಮಾಡಿ ಅಭಿನಂದಿಸಿದ ಸರಕಾರಿ ನೌಕರರ ಸಂಘದವರಿಗೆ ವೇತನಾ ಆಯೋಗ ಸೇರಿದಂತೆ ಸರಕಾರಿ ನೌಕರರ ಸಮಸ್ಯಗಳನ್ನು ಪರಿಶೀಲಿಸಿ ಸ್ಪಂದಿಸುವುದಾಗಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+