ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಡಿ.ವಿ.ಸದಾನಂದ ಗೌಡ ನೇಮಕ
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಡಿ.ವಿ.ಸದಾನಂದ ಗೌಡ ನೇಮಕ
ಎಸ್.ಬಂಗಾರಪ್ಪ ವಿಶೇಷ ಆಹ್ವಾನಿತರು
ಕರ್ನಾಟಕದಿಂದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರಾಷ್ಟ್ರೀಯ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಅರುಣ್ ಜೇಟ್ಲಿ ಮತ್ತು ರಾಜ್‌ನಾಥ್‌ಸಿಂಗ್, ಉಪಾಧ್ಯಕ್ಷರುಗಳಾಗಿ ಕಲ್ಯಾಣ್ ಸಿಂಗ್, ಬಾಬು ಲಾಲ್ ಮರಂಡಿ ಮತ್ತು ಮುಖ್ತಾರ್ ಆಬ್ಬಾಸ್ ನಕ್ವಿ ನಿಯುಕ್ತಿಗೊಂಡಿದ್ದಾರೆ. ಪಕ್ಷವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಇಂತಹ ಹಲವು ಬದಲಾವಣೆಯನ್ನು ಪಕ್ಷಾಧ್ಯಕ್ಷ ವೆಂಕಯ್ಯ ನಾಯ್ಡು ಕೈಗೊಂಡಿದ್ದಾರೆ ಎಂದು ಅರುಣ್ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications