ಯಾರು ನೈಜರು ಇವರೀರ್ವರಲ್ಲಿ ? ಬೆಳ್ತಂಗಡಿ ಕಾಂಗ್ರೆಸ್ ಅಧ್ಯಕ್ಷದ್ವಯರು
ಯಾರು ನೈಜರು ಇವರೀರ್ವರಲ್ಲಿ ? ಬೆಳ್ತಂಗಡಿ ಕಾಂಗ್ರೆಸ್ ಅಧ್ಯಕ್ಷದ್ವಯರು
ಬೆಳ್ತಂಗಡಿ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಗೌಡ-ಹರೀಶ್ ಕಚ್ಚಾಟ
ಇತ್ತೀಚಿನ ಚುನಾವಣೆಯಲ್ಲಿ ಮಾಜಿ ಸಚಿವ ಗಂಗಾಧರ ಗೌಡ ಮತ್ತು ಹರೀಶ್ ಕುಮಾರ್ ನಡುವೆ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆಯಿತ್ತು. ಕಾಂಗ್ರೆಸ್ ಟಿಕೆಟ್ ಹರೀಶ್ ಕುಮಾರ್‌ಗೆ ಒಲಿದಿತ್ತು. ಟಿಕೆಟ್ ದಕ್ಕದ ಗೌಡರು ಬೆಳಗಾವಿಗೆ ತೆರಳಿದ್ದರು.
ಈಗ ಮತ್ತೆ ಬಂದ ಗೌಡರು ಕಾನೂನು ರೀತಿಯಲ್ಲಿ ತಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂದು ಸಾರಿದ್ದಾರೆ. ನ್ಯಾಯಾಲಯದ ಆದೇಶ ತಮ್ಮ ಪರವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಬೆಂಬಲಿಗರ ಹಿಡಿತದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಭೆಯೂ ನಡೆಸಿದ್ದಾರೆ.
ಅತ್ತ ಕಡೆ ಹರೀಶ್ ತಾನೇ ಬ್ಲಾಕ್ ಅಧ್ಯಕ್ಷನೆಂದು ಕಿಸಾನ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಪಕ್ಷದ 14 ಪದಾಧಿಕಾರಿಗಳ ಪೈಕಿ ಏಳೇಳು ಮಂದಿ ಎರಡೂ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದಂತೆ ಕಾರ್ಯಕರ್ತರು ಸಹ ಸಮಪಾಲಾಗಿ ಬಿಟ್ಟಿದ್ದಾರೆ. ಕೆಲವು ಕಾರ್ಯಕರ್ತರು ಎರಡು ಕಡೆಗೆ ನಿಷ್ಠೆ ವ್ಯಕ್ತಪಡಿಸಿದ್ದು, ಇಬ್ಬರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಇವರ ಆಂತರಿಕ ಬಿಕ್ಕಟ್ಟಿನಿಂದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಭಾಕರ ಬಂಗೇರ ಜಯಗಳಿಸಿದ್ದರು.
(ಇನ್ಪೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications