ರಾಜ್ಯದಿಂದ ರಾಜ್ಯಸಭೆಗೆ ಆಸ್ಕರ್, ವೆಂಕಯ್ಯ, ಪ್ರಸಾದ್ ಆಯ್ಕೆ ಸಂಭವ
ರಾಜ್ಯದಿಂದ ರಾಜ್ಯಸಭೆಗೆ ಆಸ್ಕರ್, ವೆಂಕಯ್ಯ, ಪ್ರಸಾದ್ ಆಯ್ಕೆ ಸಂಭವ
ನಾಲ್ಕನೇ ಸ್ಥಾನಕ್ಕೆ ಲಾಬಿ ಆರಂಭ
ಕಾಂಗ್ರೆಸ್‌ನಿಂದ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಬಿಜೆಪಿಯಿಂದ ಪಕ್ಷದ ರಾಷ್ಟ್ರಾಧ್ಯಕ್ಷ ವೆಂಕಯ್ಯ ನಾಯ್ಡು ಮತ್ತು ಜಾತ್ಯತೀತ ಜನತಾದಳದಿಂದ ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಆಯ್ಕೆ ಬಹುತೇಕ ಖಚಿತ. ನಾಲ್ಕನೇ ಸ್ಥಾನಕ್ಕೆ ಕುದುರೆ ಲಾಬಿ ಈಗಾಗಲೇ ಆರಂಭವಾಗಿದೆ.
ಬಿಜೆಪಿ ಎರಡನೇ ಆಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆರು ಮತದ ಕೊರತೆ ಎದುರಿಸುತ್ತದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಆಗ ದೇವೇಗೌಡ ಸೂಚಿಸಿದ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಈ ಹಿಂದೆ ವಿಜಯ ಮಲ್ಯ ಆರಿಸಿ ಬಂದಂತೆ ನಾಲ್ಕನೇ ಆಭ್ಯರ್ಥಿ ಆಯ್ಕೆಯಾಗುವ ಸಂಭವ ತೀರಾ ವಿರಳವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications