ಜೆನಿಫರ್ ಹೋಕಿನ್ಸ್ ಮುಡಿಗೆ ಭುವನ ಸುಂದರಿ ಕಿರೀಟ
ಆಸ್ಟ್ರೇಲಿಯಾದ ಜೆನಿಫರ್ ಹೋಕಿನ್ಸ್ ಮುಡಿಗೆ ಭುವನ ಸುಂದರಿ ಕಿರೀಟ
ಫೈನಲ್ ಪ್ರವೇಶಿಸದ ಭಾರತದ ತನುಶ್ರೀದತ್ತ
ಕ್ವಿಟೋ, ಇಕ್ವೆಡಾರ್: ಆಸ್ಟ್ರೇಲಿಯಾದ ಸುಂದರಿ ಜೆನಿಫರ್ ಹೋಕಿನ್ಸ್ 2004ನೇ ಸಾಲಿನ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ.
ಅಂತಿಮ ಹಂತಗಳ ಸ್ಪರ್ಧೆ ಎರಡು ಗಂಟೆಗಳ ಕಾಲ ನಡೆಯಿತು. ಈಕೆಯ ಆಯ್ಕೆಯನ್ನು ಘೋಷಿಸುತ್ತಿದ್ದಂತೆ ಹೋಕಿನ್ಸ್ ವೇದಿಕೆಯ ಸುತ್ತ ಚೀರಾಡುತ್ತಾ ಓಡಾಡಿದರು. ನೆರೆದಿದ್ದ 7,500 ಪ್ರೇಕ್ಷಕರ ಸಮಕ್ಷಮದಲ್ಲಿ ಭುವನ ಸುಂದರಿ ಪಟ್ಟ ಅಲಂಕರಿಸಿದರು. ನೀಲಿ ಕಂಗಳ ಬಿಳಿವರ್ಣದ ಬೆಡಗಿ 80 ಸ್ಪರ್ಧಿಗಳನ್ನು ಸೋಲಿಸಿ ಕಿರೀಟ ಧರಿಸಿದರು.
ದ್ವಿತೀಯ ಸ್ಥಾನವನ್ನು ಅಮೇರಿಕಾದ ಶಾಂದಿ ಫಿನ್ನೆಸ್ಸಯ್ ಪಡೆದರೆ ಪಿಟ್ರೋರಿಕೋದಾ ಆಲ್ಬಾ ರೇಯೇಸ್ ತೃತೀಯ ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಯಿತು. ಪೆರುಗ್ವೆ ಮತ್ತು ಟ್ರೆನಿಡಾರ್ಡ್ ಸಂದರಿಯರು ಅಂತಿಮ ಹಂತ ಪ್ರವೇಶಿಸಿದ ಇನ್ನೀರ್ವರು.
2003ರ ಭುವನ ಸುಂದರಿ ಡೊಮೆನಿಕನ್ ರಿಪಬ್ಲಿಕ್‌ನ ಆಮೇಲಿಯಾ ವೇಗಾ ಕಿರೀಟಧಾರಣೆ ಮಾಡಿದರು. 20ರ ಹರೆಯದ ಬೆಡಗಿಯ ಎತ್ತರ 5 ಅಡಿ 11ಇಂಚು. ಎಲ್ಲಾ ಭುವನ ಸುಂದರಿಯರಂತೆ ಮಾಡಲಿಂಗ್, ನೃತ್ಯ, ಓದು, ಸಮಾಜ ಸೇವೆ, ಕೌಟುಂಬಿಕ ಹಿತಾಸಕ್ತಿ , ಸಿನಿಮಾ ವೀಕ್ಷಣೆ ಈಕೆಯ ಆಸಕ್ತಿ. ಲವಲವಿಕೆಯಿಂದ ಇರುವುದೇ ಇವರ ಜೀವನದ ಯಶಸ್ಸಿನ ಗುಟ್ಟು ಎನ್ನುತ್ತಾರೆ. ಸೆಮಿಫೈನಲ್‌ನಲ್ಲಿ ಹತ್ತು ಲಲನೆಯರು ಈಜುಡುಗೆ ಧರಿಸಿ ವೇದಿಕೆ ಪ್ರವೇಶಿಸಿದ್ದರು. ಭಾರತದ ತನುಶ್ರಿದತ್ತ ಅಂತಿಮ ಹಂತವನ್ನೂ ಪ್ರವೇಶಿಸದಿರುವುದು ಟಿವಿ ಮುಂದೆ ಕಾದು ಕುಳಿತ ಭಾರತೀಯರಿಗೆ ನಿರಾಸೆ ಮೂಡಿಸಿತು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications