ಕಾಂಗ್ರೆಸ್‌-ಜೆಡಿಎಸ್‌ ಅಪವಿತ್ರ ಮೈತ್ರಿಕೂಟ ವಿರುದ್ಧ ಜೆಡಿಯು ರ್ಯಾಲಿ

ಕಾಂಗ್ರೆಸ್‌-ಜೆಡಿಎಸ್‌ ಅಪವಿತ್ರ ಮೈತ್ರಿಕೂಟ ವಿರುದ್ಧ ಜೆಡಿಯು ರ್ಯಾಲಿ
ಜನತೆಯ ಆಶಯದ ವಿರುದ್ಧ ಮೈತ್ರಿಕೂಟದ ಆಡಳಿತ : ಸೋಮಶೇಖರ್‌ ಟೀಕೆ

ಹುಬ್ಬಳ್ಳಿ: ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯು ‘ಅಪವಿತ್ರ’ ಮತ್ತು ‘ಅಸ್ಥಿರ’ ವಾಗಿದೆ. ಸಂಯುಕ್ತ ಜನತಾದಳವು ಅದರ ವಿರುದ್ಧ ಬೆಂಗಳೂರಿನಲ್ಲಿ ಈ ತಿಂಗಳ ವಿಧಾನಸಭಾ ಅಧಿವೇಶನದ ಅಂತಿಮ ದಿನ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸೋಮಶೇಖರ್‌ ತಿಳಿಸಿದರು.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇದು ಅಧಿಕಾರದಾಹಿಗಳ ಮೈತ್ರಿ. ಇಂತಹ ‘ಅನೈತಿಕ ’ ಮೈತ್ರಿ ಆರು ತಿಂಗಳಿಗಿಂತ ಹೆಚ್ಚು ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಸೋಮಶೇಖರ್‌ ಟೀಕಿಸಿದರು.

ಕಾಂಗ್ರೆಸ್‌ ತನ್ನ ‘ಬಡವಿದ್ಯಾರ್ಥಿ ವಿರೋಧಿ’ ಮತ್ತು ‘ರೈತ ವಿರೋಧಿ’ ನೀತಿಗಳಿಂದಾಗಿ ರಾಜ್ಯದ ಜನತೆಯಿಂದ ತಿರಸ್ಕರಿಸಲ್ಪಟ್ಟಿದೆ. ಈಗ ಮೈತ್ರಿಕೂಟವು ಜನತೆಯ ಆಶಯದ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಪರಸ್ಪರ ಹೋರಾಡಿದವರು ಮತ್ತೆ ಜೊತೆಯಾಗಿ ಸರಕಾರ ನಡೆಸುವುದು ‘ಕೊಳಕು ರಾಜಕೀಯ’ ಎಂದು ಸೋಮಶೇಖರ್‌ ಬಣ್ಣಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+