Get Updates
Get notified of breaking news, exclusive insights, and must-see stories!

ಉದ್ಯೋಗ ಸೃಷ್ಠಿಯ ವ್ಯಾಸಂಗ ವಿಷಯದ ಬಗ್ಗೆ ಚಿಂತನೆ: ಶಿವಕುಮಾರ್‌

ಉದ್ಯೋಗ ಸೃಷ್ಠಿಯ ವ್ಯಾಸಂಗ ವಿಷಯದ ಬಗ್ಗೆ ಚಿಂತನೆ: ಶಿವಕುಮಾರ್‌
ಪದವಿ ಪಠ್ಯಗಳಲ್ಲಿ ಬಿಪಿಒ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಪ್ರಾಧಾನ್ಯತೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ತಮ್ಮ ವ್ಯಾಸಂಗ ಮುಗಿಸಿದ ತಕ್ಷಣ ಉದ್ಯೋಗ ಲಭಿಸಬೇಕೆಂಬ ನಿಟ್ಟಿನಲ್ಲಿ, ಮಾಹಿತಿ ತಂತ್ರಜ್ಞಾನ ಮತ್ತು ಬಿಪಿಓ (ಬಿಸ್ನೆಸ್‌ ಪ್ರೊಸೆಸ್‌ ಔಟ್‌ಸೋರ್ಸಿಂಗ್‌) ಬಗೆಗೆ ಸ್ಥೂಲ ಮಾಹಿತಿ ಒದಗಿಸುವ ತರಬೇತುದಾರರ ತರಬೇತಿ ಕಾರ್ಯ ಯೋಜನೆ (ಟ್ರೈನರ್ಸ್‌ ಟ್ರೈನಿಂಗ್‌ ಪ್ರೋಗ್ರಾಂ) ಯನ್ನು ಜಾರಿಗೆ ತರಲಾಗುತ್ತಿದೆ.

ಈ ತರಬೇತುದಾರರ ತರಬೇತಿ ಕಾರ್ಯ ಯೋಜನೆಯಡಿಯಲ್ಲಿ ಅಧ್ಯಾಪಕರುಗಳನ್ನು, ವಿದ್ಯಾರ್ಥಿಗಳಿಗೆ ಹೇಗೆ ಐಟಿ ಮತ್ತು ಬಿಪಿಒಗಳ ಬಗೆಗೆ ಮಾಹಿತಿ ನೀಡಬೇಕೆಂಬುದನ್ನು ಕಲಿಸಿಕೊಡುವ ಆಲೋಚನೆಯಿದೆ ಎಂದು ಕರ್ನಾಟಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಾರ್ಯದರ್ಶಿ ಕೆ.ಎಂ. ಶಿವಕುಮಾರ್‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಐಟಿ ಮತ್ತು ಬಿಪಿಒಗಳಲ್ಲಿ ಈಗ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ ಅವುಗಳಿಗೆ ಒಳ್ಳೆಯ ಭವಿಷ್ಯವೂ ಇದೆ. ಎಲ್ಲರೂ ಸರಕಾರಿ ಕೆಲಸಗಳನ್ನೇ ನಂಬಿ ಕೂರುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಅಧ್ಯಾಪಕರುಗಳಿಗೇ ಸರಿಯಾದ ತರಬೇತಿ ಕೊಟ್ಟು ವಿದ್ಯಾರ್ಥಿಗಳನ್ನು ನಿರುದ್ಯೋಗ ಸಮಸ್ಯೆಯಿಂದ ಪಾರುಮಾಡುವಲ್ಲಿ ಯಶಸ್ವಿಯಾಗಬಹುದು. ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಈಗಾಗಲೇ ಈ ತರಬೇತುದಾರರ ತರಬೇತಿ ಯೋಜನೆಯ ಸಂಬಂಧಿ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ ಎಂದು ಕೆ.ಎಂ. ಶಿವಕುಮಾರ್‌ ಅಭಿಪ್ರಾಯಪಟ್ಟರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+