ಮಂತ್ರಿಗಿರಿಗೆ ಸರ್ಕಸ್ಸು , ಪೂಜಾರಿ ಪಟಾಕಿ, ದೆಹಲಿಯಲ್ಲಿ ಶಕ್ತಿ ಕೇಂದ್ರ!

ಮಂತ್ರಿಗಿರಿಗೆ ಸರ್ಕಸ್ಸು , ಪೂಜಾರಿ ಪಟಾಕಿ, ದೆಹಲಿಯಲ್ಲಿ ಶಕ್ತಿ ಕೇಂದ್ರ!
ರಾಜಕಾರಣ ಮಾಡುವುದು ಮಂತ್ರಿಗಿರಿಗಾಗಿ ! ಅಬ್ಬಬ್ಬಾ ಸರ್ಕಸ್ಸು !

ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಪದವಿ ಗಿಟ್ಟಿಸಲು ಉಭಯ ಪಕ್ಷಗಳಲ್ಲಿ ಭಾರೀ ಲಾಬಿ ಪ್ರಾರಂಭವಾಗಿದ್ದು, ಬೆಂಗಳೂರಿನಿಂದ ದೆಹಲಿಯವರೆಗೆ ರಾಜ್ಯ ನಾಯಕರ ಸರಬರ ಓಡಾಟ ಪ್ರಾರಂಭವಾಗಿದೆ.

ಬುಧವಾರ ಅಥವಾ ಗುರುವಾರ ರಾಜ್ಯದ ನೂತನ ಸಂಪುಟ ವಿಸ್ತರಣೆಗೊಳ್ಳುವ ಸಾಧ್ಯತೆಯಿದ್ದು, ಉಭಯ ಪಕ್ಷಗಳೂ ಈಗಾಗಲೇ ತಮ್ಮ ಪಕ್ಷದ ಸಚಿವ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿವೆ ಎನ್ನಲಾಗಿದೆ. ಆದರೆ, ಕೊನೆಯ ನಿಮಿಷದಲ್ಲಿ ಸಚಿವ ಸಂಪುಟದೊಳಕ್ಕೆ ತೂರುವ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅನುಭವಿಗಳೊಂದಿಗೆ ಹೊಸ ಶಾಸಕರು ಕೂಡ ಸಚಿವ ಪಟ್ಟ ಗಿಟ್ಟಿಸಲು ಹರ ಸಾಹಸ ಪಡುತ್ತಿದ್ದಾರೆ.

ಸಂಪುಟ ಸದಸ್ಯರ ಹೆಸರುಗಳು ಬಹುತೇಕ ದೆಹಲಿಯಲ್ಲೇ ಅಂತಿಮಗೊಳ್ಳಲಿದೆ. ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ಜೆಡಿಎಸ್‌ ವರಿಷ್ಠ ದೇವೇಗೌಡ, ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೋನಿಯಾ ಮೇಡಂ ಅವರೊಂದಿಗೆ ಚರ್ಚಿಸಿದ ನಂತರ ಸಂಪುಟ ಪಟ್ಟಿ ಸಿದ್ಧಗೊಳ್ಳಲಿದೆ. ಸೋಮವಾರ ರಾತ್ರಿ ಅಥವಾ ಮಂಗಳವಾರ ಈ ಸಭೆ ನಡೆಯಲಿದೆ.

ಪೂಜಾರಿ ಪಟಾಕಿ : ಗಳಿಸಿದ ಸ್ಥಾನ ಹಾಗೂ ಮತಗಳ ಅನುಸಾರವಾಗಿ ಸಂಪುಟ ಸ್ಥಾನಗಳನ್ನು ಹಂಚಿಕೊಳ್ಳಲಾಗುವುದು. ಈ ಪ್ರಕಾರವಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಸಚಿವ ಸ್ಥಾನಗಳು ದೊರೆಯಲಿವೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಅವರ ಹೇಳಿಕೆಗೆ ಭಾರೀ ಪ್ರತಿರೋಧ ವ್ಯಕ್ತವಾಗಿದೆ.

ಕಾಂಗ್ರೆಸ್‌ ಪಕ್ಷದೊಳಗಿನಿಂದಲೇ ಪೂಜಾರಿ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಸಮ್ಮಿಶ್ರ ಸರ್ಕಾರ ಹೆಚ್ಚು ಕಾಲ ಬಾಳಬೇಕಾದರೆ ನಾಯಕರು ಸಂಯಮ ಕಳೆದುಕೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರಂತೂ ಪೂಜಾರಿ ಹೇಳಿಕೆಗೆ ಖಾರವಾದ ಪ್ರತಿಕ್ರಿಯೆ ನೀಡಿದ್ದು - ನಮಗೂ ಪೂಜಾರಿಗೂ ಸಂಬಂಧವಿಲ್ಲ . ನಮ್ಮ ಮಾತುಕತೆಯೇನಿದ್ದರೂ ಸೋನಿಯಾ ಜೊತೆ ಎಂದಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+