ವೈದ್ಯಕೀಯ ಶಿಕ್ಷಣ : ಬಡ-ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ
ವೈದ್ಯಕೀಯ ಶಿಕ್ಷಣ : ಬಡ-ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ
ಸೀಟು ಹಂಚಿಕೆ ನಿರ್ಧಾರ ಕಾಯ್ದಿರಿಸಿದ ದ್ವಿಸದಸ್ಯರ ಸಂಪುಟ ಸಭೆ
ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಹಾಗೂ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನೊಳಗೊಂಡ ನೂತನ ಸಮ್ಮಿಶ್ರ ಸರ್ಕಾರದ ಇಬ್ಬರು ಸದಸ್ಯರ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳ ಹಿತಾಸಕ್ತಿಯ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಧನ ಸಹಾಯ ಮುಂದುವರೆಸಲು ನಿರ್ಧರಿಸಿದ ಸಭೆ- ಸೀಟು ಹಂಚಿಕೆ ಸಂಬಂಧದ ನಿರ್ಧಾರವನ್ನು ಕಾಯ್ದಿರಿಸಿದೆ.
ಜಸ್ಟೀಸ್ ಮುರುಗೋಡ್ ಸಮಿತಿ ನೀಡಿರುವ ಶುಲ್ಕ ಪರಿಷ್ಕರಣೆ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವ ಕುರಿತು ಸಂಪುಟ ಸಭೆ ಪರಿಶೀಲನೆ ನಡೆಸಿತು. ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ನಡೆದ ನಂತರ ಸೀಟು ಹಂಚಿಕೆ ಸಂಬಂಧ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್ ಹೇಳಿದರು.
ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಧರ್ಮಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ಸಂಪುಟ ಸದಸ್ಯರ ಪಟ್ಟಿ ಅಂತಿಮಗೊಳಿಸುವುದಕ್ಕಾಗಿ ತಾವು ಮಂಗಳವಾರ ದೆಹಲಿಗೆ ತೆರಳುವುದಾಗಿ ಧರ್ಮಸಿಂಗ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications