ನನ್ನ ಜಿಲ್ಲೆಯ 1.53 ಲಕ್ಷ ಎಕರೆ ಭೂಮಿ ಬಾಯಾರಿದೆ - ಧರ್ಮಸಿಂಗ್
ನನ್ನ ಜಿಲ್ಲೆಯ 1.53 ಲಕ್ಷ ಎಕರೆ ಭೂಮಿ ಬಾಯಾರಿದೆ - ಧರ್ಮಸಿಂಗ್
ಸಮ್ಮಿಶ್ರ ಸರ್ಕಾರ ನಿಭಾಯಿಸುವಲ್ಲಿ ಏನೇನೂ ತೊಂದರೆಯಿಲ್ಲ , ಕಷ್ಟವೂ ಇಲ್ಲ
ಸಮ್ಮಿಶ್ರ ಸರ್ಕಾರವನ್ನು ತೂಗಿಸಿಕೊಂಡು ಹೋಗುವುದು ಕಷ್ಟವೆಂದು ತಾವು ಭಾವಿಸುವುದಿಲ್ಲ ಎಂದು ಮೇ 31ರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್ ಹೇಳಿದರು. ಸರ್ಕಾರದ ಮುಖ್ಯಸ್ಥನಾಗಿ ತಮ್ಮ ಒಲವು ನಿಲುವು ಹಾಗೂ ಕನಸುಗಳನ್ನು ಸಿಂಗ್ ಹಂಚಿಕೊಂಡರು.
ನೀರಾವರಿ ಯೋಜನೆಗಳನ್ನು ಹೆಚ್ಚಿಸುವುದು, ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಹಾಗೂ ಪಂಚಾಯತ್‌ಗಳ ಸಮರ್ಪಕ ನಿರ್ವಹಣೆ ಸಮ್ಮಿಶ್ರ ಸರ್ಕಾರದ ಆದ್ಯತೆಯ ವಿಷಯಗಳು. ಕೃಷ್ಣ ಮೇಲ್ದಂಡೆ ಯೋಜನೆಗಳಿಗಾಗಿ ಸರ್ಕಾರ ಈಗಾಗಲೇ ಸಾಕಷ್ಟು ಸಂಪನ್ಮೂಲಗಳನ್ನು ಖರ್ಚು ಮಾಡಿದೆ. ಆದರೆ, ತಮ್ಮ ತವರು ಜಿಲ್ಲೆಯಾದ ಗುಲ್ಬರ್ಗಾದಲ್ಲಿ 1.53 ಲಕ್ಷ ಎಕರೆ ಪ್ರದೇಶ ನೀರಿಗಾಗಿ ಬಾಯ್ತೆರೆದು ಕಾದಿದೆ ಎಂದು ಧರ್ಮಸಿಂಗ್ ಹೇಳಿದರು.
ಗ್ರಾಮ ಪಂಚಾಯ್ತಿಗಳು ಇನ್ನಷ್ಟು ಕ್ರಿಯಾಶೀಲವಾಗಬೇಕಿವೆ. ಸಂವಿಧಾನದ 72 ಮತ್ತು 73ನೇ ವಿಧಿಯ ಪ್ರಕಾರ ಅಧಿಕಾರದ ವಿಕೇಂದ್ರಿಕರಣವನ್ನು ಸಾಧಿಸಲಾಗಿದೆ. ಆದರೆ ಪಂಚಾಯಿತಿಗಳು ಇನ್ನಷ್ಟು ದಕ್ಷವಾಗಿ, ಜನಪರವಾಗಿ ಕೆಲಸ ಮಾಡಬೇಕು. ಸರ್ಕಾರದಿಂದ ಪ್ರತಿ ಪಂಚಾಯಿತಿಗೂ 5 ಲಕ್ಷ ರುಪಾಯಿ ಅನುದಾನ ದೊರೆಯುತ್ತಿದ್ದು , ಜನರಿಗೆ ಸ್ಪಂದಿಸುವಂತೆ ಪಂಚಾಯಿತಿಗಳ ಕಾರ್ಯ ವೈಖರಿ ರೂಪುಗೊಳ್ಳಬೇಕಿದೆ ಎಂದು ಧರ್ಮಸಿಂಗ್ ತಿಳಿಸಿದರು.
ಪೂರ್ಣ ಪ್ರಮಾಣದಲ್ಲಿ ಸಂಪುಟ ರಚನೆಯಾದ ನಂತರ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಖಚಿತ ತೀರ್ಮಾನ ಕೈಗೊಳ್ಳುವುದಾಗಿ ಧರ್ಮಸಿಂಗ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications