ಮುಂದಿನ ವಾರದ ಕಸರತ್ತಿಗೆ ‘ಸಂಪುಟ ವಿಸ್ತರಣೆ’ -ಎನ್‌.ಧರ್ಮಸಿಂಗ್‌

ಮುಂದಿನ ವಾರದ ಕಸರತ್ತಿಗೆ ‘ಸಂಪುಟ ವಿಸ್ತರಣೆ’ -ಎನ್‌.ಧರ್ಮಸಿಂಗ್‌
ನರಹಂತಕ ವೀರಪ್ಪನ್‌ ಬಂಧನಕ್ಕೆ ಶೀಘ್ರದಲ್ಲೇ ಕ್ರಿಯಾ ಯೋಜನೆ

ಬೆಂಗಳೂರು : ಬರುವ ವಾರಾಂತ್ಯದೊಳಗೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ.

34 ಸದಸ್ಯರ ಸಂಪುಟ ರಚಿಸಲಾಗುವುದು. ಸಚಿವ ಸ್ಥಾನಗಳನ್ನು ಕಾಂಗ್ರೆಸ್‌ ಹಾಗೂ ಜಾತ್ಯತೀತ ಜನತಾದಳ ಸಮನಾಗಿ ಹಂಚಿಕೊಳ್ಳಲಿವೆ ಎಂದು ಶನಿವಾರ (ಮೇ 29) ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದರು.

ಪ್ರಸ್ತುತ ಬೆಂಗಳೂರಿನಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ನ ವ್ಯವಹಾರಗಳ ಉಸ್ತುವಾರಿ ಹೊತ್ತಿರುವ ವಿಲಾಸರಾವ್‌ ದೇಶಮುಖ್‌ ಅವರೊಂದಿಗೆ ಸಂಪುಟ ರಚನೆ ಕುರಿತು ಚರ್ಚೆ ನಡೆಸಲಾಗುತ್ತದೆ. ಮೇ 31ರಂದು ತಾವು ದೆಹಲಿಗೆ ಹೋಗಲು ಉದ್ದೇಶಿಸಿದ್ದು , ಸೋನಿಯಾಗಾಂಧಿ ಅವರೊಂದಿಗೆ ಸಂಪುಟ ಸದಸ್ಯರ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಧರ್ಮಸಿಂಗ್‌ ಹೇಳಿದರು.

ಬರುವ ವಾರಾಂತ್ಯದಲ್ಲಿ ಸಂಪುಟ ರಚಿಸುವ ಕುರಿತು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರೊಂದಿಗೆ ಚರ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಶನಿವಾರ ತಿಳಿಸಿದರು.

ವೀರಪ್ಪನ್‌ ಸೆರೆಗೆ ಯೋಜನೆ : ನರಹಂತಕ ವೀರಪ್ಪನ್‌ ಬಂಧನಕ್ಕೆ ಶೀಘ್ರದಲ್ಲೇ ಕ್ರಿಯಾ ಯೋಜನೆಯಾಂದನ್ನು ರಚಿಸಲಾಗುವುದು ಎಂದು ನೂತನ ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದರು. ವೀರಪ್ಪನ್‌ ಶಿಕಾರಿಗೆ ಯಾವುದೇ ಸಮಯ ನಿಗದಿಪಡಿಸಲು ನಿರಾಕರಿಸಿದ ಧರ್ಮಸಿಂಗ್‌, ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ ಎಂದು ಬಣ್ಣಿಸಿದರು.

(ಪಿಟಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+