ಹಳ್ಳಿಗಳತ್ತ ಗಮನ, ರೈತನ ಸಮಸ್ಯೆಗಳ ಪರಿಹಾರಕ್ಕೆ ಒತ್ತು -ಧರ್ಮಸಿಂಗ್
ಹಳ್ಳಿಗಳತ್ತ ಗಮನ, ರೈತನ ಸಮಸ್ಯೆಗಳ ಪರಿಹಾರಕ್ಕೆ ಒತ್ತು -ಧರ್ಮಸಿಂಗ್
ಸೈದ್ಧಾಂತಿಕ ರಾಜಿಯಿಲ್ಲ - ಸಿದ್ಧರಾಮಯ್ಯ ಸ್ಪಷ್ಟನೆ
ಜನ ಪರವಾದ ಕೆಲಸ, ಜನ ಹಿತ ಕಾಯ್ದುಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೈತರ ಹಿತಾಸಕ್ತಿಯನ್ನು ಕಾಪಾಡಬೇಕಿದೆ. ರೈತರಿದ್ದರೆ ನಾವು. ರೈತರ ಆಶೋತ್ತರಗಳನ್ನು ಅರಿತು, ಅವರ ಕುಂದು ಕೊರತೆಗಳ ನಿವಾರಣೆಗೆ ನಾನು ಮೊದಲ ಆದ್ಯತೆ ಕೊಡುತ್ತೇನೆ. ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಜೆಡಿಎಸ್ ಜೊತೆ ಜೊತೆಯಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಧರ್ಮಸಿಂಗ್ ತಮ್ಮ ಚೊಚ್ಚಿಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ದೇವರಾಜ್ ಅರಸು ಅವರು ಯಾವ ತೆರನಾದ ಸಾಮಾಜಿಕ ನ್ಯಾಯ ಒದಗಿಸಿದ್ದರೋ ಅದೇ ರೀತಿ ಜನಪರ ಕಾರ್ಯದಲ್ಲಿ ತೊಡಗಲಿದ್ದೇವೆ ಎಂದು ನೂತನ ಮುಖ್ಯಮಂತ್ರಿ ಧರ್ಮಸಿಂಗ್ ನುಡಿದರು.
ರಾಜ್ಯದ ಹಿತಾಸಕ್ತಿಗಾಗಿ ತ್ಯಾಗ : ರಾಜ್ಯದ ಹಿತಾಸಕ್ತಿಗಾಗಿ ಮುಖ್ಯಮಂತ್ರಿ ಪದವನ್ನು ತ್ಯಾಗಮಾಡಬೇಕಾಯಿತು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ವರಿಷ್ಠರ ತೀರ್ಮಾನಕ್ಕೆ ತಲೆ ಬಾಗಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದೊಳಗೆ ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಕಾರ್ಯ ನಿರ್ವಹಿಸುತ್ತದೆ. ಆದರೆ ವಿಧಾನಸೌಧದ ಹೊರಗೆ ಸೈದ್ಧಾಂತಿಕ ಸಂಘರ್ಷ ಮುಂದುವರಿಯುತ್ತದೆ. ಯಾವುದೇ ವಿಷಯದಲ್ಲಿ ಜೆಡಿಎಸ್ ರಾಜಿಗೊಳಗಾಗದು ಎಂದು ಸಿದ್ಧರಾಮಯ್ಯ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications