ಯಶಸ್ವಿನಿ ಯೋಜನೆಯಡಿ 650ಕ್ಕೂ ಹೆಚ್ಚು ಹೃದ್ರೋಗಿಗಳ ಶಸ್ತ್ರ ಚಿಕಿತ್ಸೆ
ಯಶಸ್ವಿನಿ ಯೋಜನೆಯಡಿ 650ಕ್ಕೂ ಹೆಚ್ಚು ಹೃದ್ರೋಗಿಗಳ ಶಸ್ತ್ರ ಚಿಕಿತ್ಸೆ
ವಿಮಾ ಕಂಪನಿಯಿಂದ ಚಿಕಿತ್ಸೆಯ ಸಂಪೂರ್ಣ ವೆಚ್ಚ ಪಾವತಿ
ನಾಲ್ಕು ಮಂದಿ ಹೃದ್ರೋಗಿಗಳು 2 ಲಕ್ಷ ರೂ ವೆಚ್ಚದ ಹೃದಯ ಶಸ್ತ್ರಚಿಕಿತ್ಸೆ ಗೆ ಒಳಗಾಗಿದ್ದಾರೆ. ಉಳಿದವರ ಚಿಕಿತ್ಸೆಯ ವೆಚ್ಚ 2 ಲಕ್ಷ ರು.ಗಿಂತ ಕಡಿಮೆಯದು. ಚಿಕಿತ್ಸೆಯ ಸಂಪೂರ್ಣ ಮೊತ್ತವನ್ನು ವಿಮಾ ಕಂಪನಿ ನೀಡಿದೆ ಎಂದು ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎ. ರಮೇಶ್ ತಿಳಿಸಿದ್ದಾರೆ. ಯಶಸ್ವಿನಿ ಸಹಕಾರಿ ರೈತ ಆರೋಗ್ಯ ವಿಮಾ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ರಮೇಶ್ ಮಾತನಾಡುತ್ತಿದ್ದರು.
ಯಶಸ್ವಿನಿ ಯೋಜನೆ ಎಸ್ಸೆಂ.ಕೃಷ್ಣ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾಗಿದ್ದು , ಈ ಯೋಜನೆಯಿಂದಾಗಿ ರೈತ ಸಮುದಾಯದ ಬಡ ಹೃದ್ರೋಗಿಗಳು ಉತ್ತಮ ಚಿಕಿತ್ಸೆ ಹೊಂದುವುದು ಸಾಧ್ಯವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications