ಕೈಕೊಟ್ಟ ‘ಹಿತಾನುಭವ, ಭಾರತ ಪ್ರಕಾಶಿಸುತ್ತಿದೆ’ ಘೋಷಣೆ -ಅಡ್ವಾಣಿ

ಕೈಕೊಟ್ಟ ‘ಹಿತಾನುಭವ, ಭಾರತ ಪ್ರಕಾಶಿಸುತ್ತಿದೆ’ ಘೋಷಣೆ -ಅಡ್ವಾಣಿ
ಸೋಲು ತಾತ್ಕಾಲಿಕ, ಬಿಜೆಪಿ ಮತ್ತೆ ‘ಪ್ರಕಾಶಿಸಲಿದೆ’.........

ನವದೆಹಲಿ : ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಅನುಭವಿಸಿದ ಸೋಲು ತಾತ್ಕಾಲಿಕ. ಬಿಜೆಪಿ ಮತ್ತೆ ಪ್ರಕಾಶಿಸಲಿದೆ ಎಂದು ಮಾಜಿ ಉಪ ಪ್ರಧಾನಿ ಹಾಗೂ ಬಿಜೆಪಿ ಧುರೀಣ ಎಲ್‌.ಕೆ.ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ಮುಂದಿನ ದಿನಗಳು ಉಜ್ವಲವಾಗಿವೆ. ಪ್ರಸಕ್ತ ಹಿನ್ನಡೆ ತಾತ್ಕಾಲಿಕವಾದುದು. ಪಕ್ಷ ಮತ್ತೆ ಮುನ್ನಡೆಗೆ ಬರುವ ಕುರಿತು ನನಗೆ ವಿಶ್ವಾಸವಿದೆ ಎಂದು ಶುಕ್ರವಾರ (ಮೇ 28) ಸುದ್ದಿಗಾರರೊಂದಿಗೆ ಮಾತನಾಡಿದ ಅಡ್ವಾಣಿ ಹೇಳಿದರು. ಚುನಾವಣೆಯ ಸೋಲಿನ ನಂತರ ಅಡ್ವಾಣಿ ಅವರ ಮೊದಲ ಬಹಿರಂಗ ಹೇಳಿಕೆ ಇದಾಗಿದೆ.

ಚುನಾವಣೆಯ ಫಲಿತಾಂಶ ಆಶ್ಚರ್ಯ ಉಂಟುಮಾಡಿದೆ. ಇಂಥ ಫಲಿತಾಂಶವನ್ನು ನಾವು ನಿರೀಕ್ಷಿಸಿರಲಿಲ್ಲ . ನಾವಷ್ಟೇ ಅಲ್ಲ , ಪ್ರಸ್ತುತ ಸರ್ಕಾರ ರಚಿಸಿರುವ ನಮ್ಮ ವಿರೋಧಿಗಳು ಕೂಡ ಈ ರೀತಿಯ ಫಲಿತಾಂಶ ನಿರೀಕ್ಷಿಸಿರಲಿಲ್ಲ ಎಂದು ಅಡ್ವಾಣಿ ಹೇಳಿದರು.

ಭಾರತ ಪ್ರಕಾಶಿಸುತ್ತಿದೆ ಹಾಗೂ ಹಿತಾನುಭವ ಸ್ಲೋಗನ್‌ಗಳು ಕೈಕೊಟ್ಟಿವೆ. ಸರ್ಕಾರದ ಈ ಘೋಷಣೆಗಳು ಎನ್‌ಡಿಎಗೆ ಲಾಭ ತರಲಿಲ್ಲ ಎಂದ ಅಡ್ವಾಣಿ, ಜನತೆಯ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಿರುವುದಾಗಿ ಹೇಳಿದರು. ರಚನಾತ್ಮಕ ಪ್ರತಿಪಕ್ಷವಾಗಿ ಬಿಜೆಪಿ ಕಾರ್ಯ ನಿರ್ವಹಿಸಲಿದೆ ಎಂದು ಅಡ್ವಾಣಿ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+