ಜನಪ್ರಿಯ ಲೇಖಕಿ ಅನಸೂಯಾದೇವಿಗೆ ‘ವಿಶು ಕುಮಾರ್’ ಪುರಸ್ಕಾರ
ಜನಪ್ರಿಯ ಲೇಖಕಿ ಅನಸೂಯಾದೇವಿಗೆ ‘ವಿಶು ಕುಮಾರ್’ ಪುರಸ್ಕಾರ
ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಪ್ರತಿಷ್ಠಿತ ಪ್ರಶಸ್ತಿ
ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ನೀಡುವ ವಿಶುಕುಮಾರ್ ಪ್ರಶಸ್ತಿ 5 ಸಾವಿರ ರುಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಪತ್ರಕರ್ತ, ಲೇಖಕ, ನಟ ಹಾಗೂ ರಾಜಕಾರಣಿಯಾಗಿ ಮಹತ್ವದ್ದನ್ನು ಸಾಧಿಸಿರುವ ವಿಶುಕುಮಾರ್ ಅವರ ಸ್ಮರಣಾರ್ಥ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವೇದಿಕೆಯ ಅಧ್ಯಕ್ಷ ಲಕ್ಷ್ಮಣ ಸಾಲ್ಯಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಂಗಳೂರಿನ ಬಿಎಚ್‌ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಅನಸೂಯದೇವಿ ಧರ್ಮಸ್ಥಳದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಗೊರೂರು ಪ್ರತಿಷ್ಠಾನದ ಗೊರೂರು ಪ್ರಶಸ್ತಿ ಪಡೆದಿದ್ದಾರೆ. ಪ್ರಕೃತಿ ಪುರುಷ, ಅಮ್ಮ ನಿನ್ನ ನೆನಪಿಗೆ, ಕೇಶವ ನಮನ ಹಾಗೂ ಅನನ್ಯ ಅನಸೂಯದೇವಿಯವರ ಇತರ ಕೃತಿಗಳು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications