ಸೋನಿಯಾ-ಧರ್ಮ ಭೇಟಿ ; ಸರ್ಕಾರ ರಚನೆ ಸೂತ್ರಕ್ಕೆ ಟಚಪ್ ಬಾಕಿ
ಸೋನಿಯಾ-ಧರ್ಮ ಭೇಟಿ ; ಸರ್ಕಾರ ರಚನೆ ಸೂತ್ರಕ್ಕೆ ಟಚಪ್ ಬಾಕಿ
ಶುಕ್ರವಾರ ಬೆಳಗ್ಗೆ ವೇಳೆಗೆ ಸ್ಪಷ್ಟ ಚಿತ್ರ ಸಂಭವ
ಮೇ 27ರ ಗುರುವಾರ ಮಧ್ಯಾಹ್ನ ಸೋನಿಯಾ ಅವರನ್ನು ಭೇಟಿ ಮಾಡಿದ ಧರ್ಮಸಿಂಗ್ ಸರ್ಕಾರ ರಚನೆಯ ಸಾಧ್ಯತೆಗಳ ಕುರಿತು ಚರ್ಚಿಸಿದರು. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಸಿಂಗ್- ದೇವೇಗೌಡರೊಂದಿಗೆ ಚರ್ಚೆಯ ನಂತರ ಸರ್ಕಾರ ರಚನೆಯ ಸ್ಪಷ್ಟ ಚಿತ್ರ ಮೂಡಲಿದೆ ಎಂದರು.
ದೇವೇಗೌಡ ಹಾಗೂ ಕಾಂಗ್ರೆಸ್ ನಾಯಕರಾದ ವಿಲಾಸ್‌ರಾವ್ ದೇಶ್‌ಮುಖ್, ಅಹ್ಮದ್ ಪಟೇಲ್, ಧರ್ಮಸಿಂಗ್ ನಡುವೆ ಇನ್ನೊಂದು ಸುತ್ತಿನ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ರೂಪುರೇಷೆಗಳನ್ನು ನಿರ್ಧರಿಸುವ ಸಾಧ್ಯತೆಯಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications