ಈಗ ವಿಧಾನ ಪರಿಷತ್ತಿನ ಸರದಿ; ಜೂ.24ರಂದು 4 ಕ್ಷೇತ್ರಕ್ಕೆ ಹಣಾಹಣಿ
ಈಗ ವಿಧಾನ ಪರಿಷತ್ತಿನ ಸರದಿ; ಜೂ.24ರಂದು 4 ಕ್ಷೇತ್ರಕ್ಕೆ ಹಣಾಹಣಿ
ನಾಮಪತ್ರಗಳನ್ನು ಸಲ್ಲಿಸಲು ಜೂನ್ 7 ಕೊನೆದಿನ
ಜೂನ್ 30 ರಂದು ನಿವೃತ್ತರಾಗುತ್ತಿರುವ ಎಂ.ಪಿ.ನಾಡಗೌಡ, ಜಿ.ಮಧುಸೂದನ, ಎಸ್.ಎಸ್.ಪೂಜಾರಿ ಹಾಗೂ ಬಸವರಾಜ ಹೊರಟ್ಟಿ ಅವರ ಸ್ಥಾನಗಳನ್ನು ತುಂಬಲು ಈ ಚುನಾವಣೆ ನಡೆಯುತ್ತಿದೆ. ಚುನಾವಣಾ ಅಧಿಸೂಚನೆ ಮೇ 31 ರಂದು ಹೊರಡಲಿದ್ದು , ನಾಮಪತ್ರಗಳನ್ನು ಸಲ್ಲಿಸಲು ಜೂನ್ 7 ಕೊನೆದಿನ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಎಚ್.ಸಿ.ನಾಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 8ರಂದು ನಾಮಪತ್ರಗಳ ಪರಿಶೀಲನೆ ನಡೆಯುವುದು. ನಾಮಪತ್ರ ವಾಪಸ್ಸು ಪಡೆಯಲು ಜೂನ್ 10 ಕೊನೆದಿನ. ಜೂನ್ 24ರಂದು ಚುನಾವಣೆ ನಡೆಯುವುದು ಎಂದು ನಾಗೇಂದ್ರ ತಿಳಿಸಿದ್ದಾರೆ. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಈ ಚುನಾವಣೆಗಳು ನಡೆಯಲಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications