ಬಹುಕೋಟಿ ಛಾಪಾ ಪಾಪ : ಬೆಂಗಳೂರ ವಿವಿಧೆಡೆಯಲ್ಲಿ ಸಿಬಿಐ ದಾಳಿ
ಬಹುಕೋಟಿ ಛಾಪಾ ಪಾಪ : ಬೆಂಗಳೂರ ವಿವಿಧೆಡೆಯಲ್ಲಿ ಸಿಬಿಐ ದಾಳಿ
ತೆಲಗಿ ನೀಡಿದ ಸುಳಿವಿನ ಮೇರೆಗೆ ದಾಳಿ ?
ಬೆಂಗಳೂರಿನ ವಿವಿಧೆಡೆಗಳಲ್ಲಿ ದಾಳಿ ನಡೆಸಲಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ. ದೇಶಾದ್ಯಂತ ಬೀರು ಬಿಟ್ಟಿರುವ ನಕಲಿ ಛಾಪಾ ಜಾಲದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು , ಬೆಂಗಳೂರಿನ ದಾಳಿಗಳು ತನಿಖೆಯ ಅಂಗವಾಗಿ ನಡೆದಿವೆ ಎನ್ನಲಾಗಿದೆ.
ಛಾಪಾ ಪಾಪದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ ತೆಲಗಿಯನ್ನು ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸುವ ಆದೇಶವನ್ನು ಪುಣೆಯ ಹೈಕೋರ್ಟ್ ಕಳೆದ ವಾರ ನೀಡಿತ್ತು . ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ ತೆಲಗಿ ಪ್ರಸ್ತುತ ಸಿಬಿಐ ವಶದಲ್ಲಿದ್ದಾನೆ. ದೆಹಲಿಯಲ್ಲಿ ತೆಲಗಿಯ ವಿಚಾರಣೆ ನಡೆಯುತ್ತಿದ್ದು , ತೆಲಗಿ ನೀಡಿದ ಸುಳಿವಿನ ಮೇರೆಗೆ ಸಿಬಿಐ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ.
ದಾಳಿಯ ಬಗೆಗಿನ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications