ರಾಷ್ಟ್ರೀಯ ಭದ್ರತಾಸಲಹೆಗಾರ ಹುದ್ದೆಗೆ ನಿಷ್ಠಾವಂತ ಜೆ.ಎನ್.ದೀಕ್ಷಿತ್
ರಾಷ್ಟ್ರೀಯ ಭದ್ರತಾಸಲಹೆಗಾರ ಹುದ್ದೆಗೆ ನಿಷ್ಠಾವಂತ ಜೆ.ಎನ್.ದೀಕ್ಷಿತ್
ಬ್ರಜೇಶ್ ಮಿಶ್ರಾ ಸ್ಥಾನಕ್ಕೆ ಎಐಸಿಸಿ ರಕ್ಷಣೆ-ಭದ್ರತೆ-ವಿದೇಶಾಂಗ ನೀತಿ ನಿರೂಪಕ
ಶ್ರೀಲಂಕಾ ಹಾಗೂ ಪಾಕಿಸ್ತಾನಗಳಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ದೀಕ್ಷಿತ್- ವಿದೇಶಾಂಗ ಸೇವೆಯಲ್ಲಿ ಅನೇಕ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರು ಭಾರತ ಸರ್ಕಾರದ ಭದ್ರತಾ ಸಲಹೆಗಾರರ ಹುದ್ದೆಯನ್ನು ಶೀಘ್ರವೇ ವಹಿಸಿಕೊಳ್ಳುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ನ ವಿದೇಶಾಂಗ, ಭದ್ರತೆ ಹಾಗೂ ರಕ್ಷಣಾ ನೀತಿಯನ್ನು ದೀಕ್ಷಿತ್ ರಚಿಸಿದ್ದರು. ಪ್ರಸ್ತುತ ಎಐಸಿಸಿ ವಿದೇಶಾಂಗ ವ್ಯವಹಾರಗಳ ಇಲಾಖೆಯ ಉಪಾಧ್ಯಕ್ಷರಾಗಿ ದೀಕ್ಷಿತ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಾಜಪೇಯಿ ಸರ್ಕಾರದಲ್ಲಿ ಭದ್ರತಾ ಸಲಹೆಗಾರರಾಗಿದ್ದ ಬ್ರಜೇಶ್ ಮಿಶ್ರಾ, ಡಾ.ಮನಮೋಹನ್‌ಸಿಂಗ್ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications