ಇದು ಹೊಸಬರ ಕಾಲ : ಅಟಾರ್ನಿ ಜನರಲ್ ಸೊರಾಬ್ಜಿ ರಾಜಿನಾಮೆ
ಇದು ಹೊಸಬರ ಕಾಲ : ಅಟಾರ್ನಿ ಜನರಲ್ ಸೊರಾಬ್ಜಿ ರಾಜಿನಾಮೆ
ಆಡಳಿತ ಕಾನೂನು ಪುಸ್ತಕ ಬರೆಯಲು ಒಲವು
ಸರಕಾರ ಬದಲಾವಣೆಯಾದ ಸಂದರ್ಭದಲ್ಲಿ ನೇಮಕಗೊಂಡ ಅಧಿಕಾರಿಗಳು ರಾಜಿನಾಮೆ ನೀಡುವುದು ಸಂಪ್ರದಾಯ. ಅಂತೆಯೇ ಸೊರಬ್ಜಿ ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರಿಗೆ ಸಲ್ಲಿಸಿದ್ದಾರೆ. ರಾಜಿನಾಮೆ ಪ್ರತಿಯನ್ನು ನೂತನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾನೂನು ಸಚಿವ ಹಂಸ ರಾಜ್ ಭಾರಧ್ವಜ್ ಅವರಿಗೂ ಕಳುಹಿಸಿಕೊಡಲಾಗಿದೆ.
ರಾಜೀನಾಮೆ ನೀಡಿದ್ದರೂ, ಹಿಂದಿನ ಸರಕಾರ ಎದುರಿಸುತ್ತಿದ್ದ ಕೆಲವು ವಿಚಾರಣೆಗಳಿಗೆ ವಿವರಣೆ ನೀಡಲು ಸೊರಾಬಿ ನ್ಯಾಯಾಲಯಕ್ಕೆ ಬರಬೇಕಾಗುವುದು.
ಎನ್‌ಡಿಎ ಮರಳಿ ಅಧಿಕಾರ ಪಡೆದರೂ ತಾನು ರಾಜಿನಾಮೆ ಸಲ್ಲಿಸುವುದಾಗಿ ಅವರು ಮಾರ್ಚ್ ತಿಂಗಳಿನಲ್ಲೇ ಕಾನೂನು ಸಚಿವಾಲಯಕ್ಕೆ ತಿಳಿಸಿದ್ದರು. ಆಡಳಿತ ಕಾನೂನು ಕುರಿತ ಪುಸ್ತಕ ಬರೆಯಲು ತಯಾರು ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications