ಶಾಪ ವಿಮುಕ್ತ ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಮಳೆ ಮಳೆ ಮಳೆ
ಶಾಪ ವಿಮುಕ್ತ ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಮಳೆ ಮಳೆ ಮಳೆ
ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆಗಳಲ್ಲಿ ಮಳೆ ಬಂತು ಮಳೆ
ಕಳೆದ ವಾರ ಉತ್ತಮ ಮಳೆಯಾಗಿದ್ದ ಕೊಡಗಿನಲ್ಲಿ ಮುಂಗಾರಿನ ಮೊದಲ ದಿನದಿಂದಲೇ ಮಳೆ ಪ್ರಾರಂಭವಾಗಿದೆ. ಮೇ 23ರ ಭಾನುವಾರ ಹಾಗೂ 24ರ ಸೋಮವಾರ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆಗಳಲ್ಲಿ ಮಳೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 17.7ಮಿಮಿ ಮಳೆ ಮಡಿಕೇರಿಯಲ್ಲಿ ದಾಖಲಾಗಿದ್ದರೆ, ಸೋಮವಾರಪೇಟೆಯಲ್ಲಿ 2.2 ಮಿಮೀ ಮಳೆಬಿದ್ದಿದೆ.
2004ರ ಜನವರಿಯಿಂದ ಇಂದಿನವರೆಗೆ ಕೊಡಗಿನಲ್ಲಿ ಬಿದ್ದಿರುವ ಮಳೆಯ ಪ್ರಮಾಣ ಇಂತಿದೆ : ಮಡಿಕೇರಿ- 354 ಮಿಮೀ. ಸೋಮವಾರಪೇಟೆ-317.9ಮಿಮೀ. ವಿರಾಜಪೇಟೆ-464 ಮಿಮೀ.
ಹಾರಂಗಿ ಜಲಾಶಯದಲ್ಲಿ ಸೋಮವಾರ ನೀರಿನ ಮಟ್ಟ 2798.43 ಅಡಿಗಳಷ್ಟಿತ್ತು . ಜಲಾಶಯದ ಗರಿಷ್ಠ ಮಟ್ಟ 2799.12 ಅಡಿಗಳು. ಸದ್ಯಕ್ಕೆ ಜಲಾಶಯದ ಆಸುಪಾಸಿನಲ್ಲಿ ಮಳೆ ಬೀಳುತ್ತಿಲ್ಲವಾದ ಕಾರಣ, ಒಳಹರಿವು ತಗ್ಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications