ಮುಂಗಾರೊಲಿದ ಗುಲ್ಬರ್ಗಾ ಜಿಲ್ಲೆಯಲ್ಲಿ ರೈತರಿಗೀಗ ಬಿಡುವೆಂಬುದಿಲ್ಲ
ಮುಂಗಾರೊಲಿದ ಗುಲ್ಬರ್ಗಾ ಜಿಲ್ಲೆಯಲ್ಲಿ ರೈತರಿಗೀಗ ಬಿಡುವೆಂಬುದಿಲ್ಲ
ಉಳುಮೆ ಆರಂಭ, ಬೀಜಗಳ ತಲಾಷಿನಲ್ಲಿ ರೈತರು
ಮಳೆ ಬೀಳುತ್ತಿರುವಂತೆ ರೈತರ ಮುಖಗಳಲ್ಲಿ ಕನಸುಗಳು ಚಿಗುರುತ್ತಿದ್ದು ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಉಳುಮೆ ಬಿತ್ತನೆಯಲ್ಲಿ ತೊಡಗುತ್ತಿದ್ದ ರೈತರು, ಈ ಬಾರಿ ಮೇ ತಿಂಗಳ ಮಧ್ಯಭಾಗದಲ್ಲೇ ಹೊಲಕ್ಕಿಳಿದಿದ್ದಾರೆ. ಮುಂಗಾರು ಉತ್ತಮವಾಗಿ ಬೀಳುತ್ತಿರುವುದರಿಂದ ಹಾಗೂ ಮುಂದಿನ ದಿನಗಳಲ್ಲೂ ಉತ್ತಮ ಮಳೆ ಬೀಳುವ ನಿರೀಕ್ಷೆಯಿಂದ ರೈತರು ಕೃಷಿ ಕಾರ್ಯಗಳಲ್ಲಿ ಆಸಕ್ತಿಯಿಂದ ತೊಡಗಿದ್ದು , ಬೀಜ ಹೊಂಚಿಕೊಳ್ಳುವ ಹವಣಿಕೆಯಲ್ಲಿದ್ದಾರೆ.
ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ ಹಾಗೂ ತೊಗರಿಯನ್ನು ಬಿತ್ತಲು ಬಹುತೇಕ ರೈತರು ಮುಂದಾಗಿದ್ದಾರೆ. ಕಳೆದ ಮೂರು ವರ್ಷಗಳ ಬರದಿಂದಾಗಿ ಗುಲ್ಬರ್ಗಾದ ಜನತೆ ಕಂಗೆಟ್ಟಿದ್ದರು. ಬಹುತೇಕ ರೈತರು ಸನಿಹದ ಪಟ್ಟಣ ಪ್ರದೇಶಗಳಿಗೆ ಜೀವನೋಪಾಯಕ್ಕಾಗಿ ವಲಸೆ ಹೋಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications