ಸರ್ಕಾರ ರಚನೆಗೆ 3 ದಿನದ ಗಡುವು: ರಾಜ್ಯಪಾಲರಿಗೆ ಪೂಜಾರಿ ಮೊರೆ
ಸರ್ಕಾರ ರಚನೆಗೆ 3 ದಿನದ ಗಡುವು: ರಾಜ್ಯಪಾಲರಿಗೆ ಪೂಜಾರಿ ಮೊರೆ
ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳಲೂ ಕಾಂಗ್ರೆಸ್ ಸಿದ್ಧ
ಮೇ 24ರ ಸೋಮವಾರ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ, ಜಾತ್ಯತೀತ ಜನತಾದಳದ ನೇತೃತ್ವದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಮೂರು ದಿನಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.
ರಾಜ್ಯಪಾಲರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ- ವೈಯಕ್ತಿಕವಾಗಿ ಮಹಾರಾಷ್ಟ್ರ ಮಾದರಿಯ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಸರ್ಕಾರ ರಚನೆಯ ಕುರಿತು ಒಲವು ಹೊಂದಿದ್ದೇನೆ. ಈ ಕುರಿತ ಪ್ರಸ್ತಾವನೆಯನ್ನೇ ಪಕ್ಷದ ಹೈಕಮಾಂಡ್ ಮುಂದಿಡಲಾಗಿದೆ. ಈ ಕುರಿತು ಜೆಡಿಎಸ್ ಜೊತೆ ಕೆಲದಿನಗಳಿಂದ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಕೊನೆಯ ಸಾಧ್ಯತೆಯಾಗಿ ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳಲು ಕಾಂಗ್ರೆಸ್ ಸಿದ್ಧ ಎಂದು ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಪೂಜಾರಿ ಪ್ರತಿಕ್ರಿಯಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications