ಅದೋ ನೋಡು ಮುಂಗಾರು ! ಕರುನಾಡು ಆಗಸದಿ ಕಣ್ಣೊಡೆದ ಮಳೆ
ಅದೋ ನೋಡು ಮುಂಗಾರು ! ಕರುನಾಡು ಆಗಸದಿ ಕಣ್ಣೊಡೆದ ಮಳೆ
ಕರಾವಳಿ, ಒಳನಾಡಿನಲ್ಲಿ ಭಾರೀ ಮಳೆ ನಿರೀಕ್ಷೆ
ನೈರುತ್ಯ ಮುಂಗಾರು ರಾಜ್ಯಕ್ಕೆ ಸಮೀಪವಾಗಿದ್ದು - ಕರಾವಳಿ, ಒಳನಾಡು ಹಾಗೂ ಮಲೆನಾಡುಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಕೇರಳದಲ್ಲಿ ಕೇಂದ್ರೀಕೃತಗೊಂಡಿರುವ ಮುಂಗಾರು ಮುಂದಿನ 24 ತಾಸುಗಳಲ್ಲಿ ನೆರೆಹೊರೆ ಪ್ರದೇಶಗಳಿಗೆ ಪಾದ ಬೆಳಸಲಿವೆ ಎಂದು ಹವಾಮಾನ ಇಲಾಖೆ ಲೆಕ್ಕಾಚಾರ ಹಾಕಿದೆ.
ಇತ್ತ ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರ ಮಂಗಳೂರಿನಲ್ಲಿ ಶನಿವಾರ (ಮೇ 22) ಮುಂಜಾನೆಯಿಂದಲೇ ಮಳೆ ಮಾಯೆ ಶುರುವಾಗಿದೆ. ಮೇ ತಿಂಗಳು ಶುರುವಾದದ್ದೇ ತಡ, ಮಂಗಳೂರಲ್ಲಿ ಮಳೆಯ ಕಣ್ಣಾಮುಚ್ಚಾಲೆ ಶುರುವಾಗಿತ್ತು . ನೆನೆಮಳೆಯಿಂದಾಗಿ ಭೂಮಿ ತಣಿದಿದ್ದು , ಪ್ರಸ್ತುತ ಬರುವ ಮಳೆಯಿಂದ ಅಂತರ್ಜಲ ವೃದ್ಧಿಯಾಗುವ ನಿರೀಕ್ಷೆಯಿದೆ.
ಮಳೆರಾಯನಲ್ಲಿ ಒಂದೇ ಪ್ರಾರ್ಥನೆ- ಬಡವರ ಮೇಲೆ ಮುನಿಸುಬೇಡ. ಮಳೆ ಸುರಿಯಲಿ, ಮಳೆ ನೀರಿನೊಂದಿಗೆ ಕಣ್ಣೀರು ಬೆರೆಯದಿರಲಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications