ಅವರ್ನ ಬಿಟ್ ಇವರ್ನ ಬಿಟ್ ಮತ್ಯಾರು ? ಕೃಷ್ಣಯ್ಯನಲ್ಲದೆ ಇನ್ನಾರು .... ?
ಅವರ್ನ ಬಿಟ್ ಇವರ್ನ ಬಿಟ್ ಮತ್ಯಾರು ? ಕೃಷ್ಣಯ್ಯನಲ್ಲದೆ ಇನ್ನಾರು .... ?
ಜೆಡಿಎಸ್ ಪಾಳಯದಲಿ ್ಲಬಿಜೆಪಿ ಜೊತೆ ಸಖ್ಯ ಬೆಳಸುವ ಗುಸುಗುಸು
ಕಾಂಗ್ರೆಸ್‌ನ ಒಂದು ಮೂಲ ಹೌದೆನ್ನುತ್ತಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೃಷ್ಣರ ನಾಯಕತ್ವದ ಕುರಿತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಒಲವು ವ್ಯಕ್ತಪಡಿಸಿದ್ದಾರೆ. ಧರ್ಮಸಿಂಗ್ ಹಾಗೂ ಖರ್ಗೆ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರೂ, ಸೋನಿಯಾ ಕೃಪೆಯಿಂದ ಕೃಷ್ಣ ಮುಖ್ಯಮಂತ್ರಿಯಾಗಿಯೇ ಉಳಿಯುತ್ತಾರೆ ಎಂದು ಕೆಲವು ಕಾಂಗ್ರೆಸ್ಸಿಗರು ಆಣೆ ಮಾಡಿ ಹೇಳುತ್ತಿದ್ದಾರೆ.
ಇನ್ನೊಂದು ಕಡೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಾತ್ಯತೀತ ಜನತಾದಳ ರಚ್ಚೆ ಹಿಡಿದು ಕೂತಿದ್ದರೂ ಅದರ ಹಠ ದಿನೇದಿನೇ ಕಡಿಮೆಯಾಗುತ್ತಿದೆ. ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ಸಿಗೇ ಸಲ್ಲಬೇಕು ಎನ್ನುವ ಮಾತು ಸೋನಿಯಾ ಅವರ ಬಾಯಿಂದ ಯಾವಾಗ ಬಂತೋ, ಆಗಿನಿಂದಲೇ ಜೆಡಿಎಸ್ ಪಾಳಯದಲ್ಲಿನ ಉತ್ಸಾಹ ಅರ್ಧಕ್ಕರ್ಧ ಕಡಿಮೆಯಾಗಿದೆ.
ಬಿಜೆಪಿ ಜೊತೆ ಸಖ್ಯ ಬೆಳಸುವ ಗುಸುಗುಸು ಕೂಡ ಜೆಡಿಎಸ್ ಪಾಳಯದಲ್ಲಿ ಕೇಳಿಬರುತ್ತಿದೆ. ಆದರೆ ಬಿಜೆಪಿ ಸಖ್ಯದ ಮಾತು ಎತ್ತಿದ ನಾಯಕರನ್ನು ಮಾಜಿ ಪ್ರಧಾನಿ ದೇವೇಗೌಡ ಗದರಿಕೊಂಡಿದ್ದಾರೆ. ಪ್ರಮಾಣವಚನ ಸ್ವೀಕರಿಸಲು ಹೊಸ ಜುಬ್ಬಾ ಹೊಲಿಸಿಕೊಂಡಿರುವ ಸಿದ್ಧರಾಮಯ್ಯ ಕೂಡ ಬಿಜೆಪಿ ಜೊತೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಶುಕ್ರವಾರ ಪುನರುಚ್ಛರಿಸಿದ್ದಾರೆ.
ಶನಿವಾರ ಹಾಗೂ ಭಾನುವಾರ ಕೇಂದ್ರ ರಾಜಕಾರಣದ್ದೇ ಮಾತುಕತೆ. ಎಲ್ಲೆಡೆಯೂ ಮನಮೋಹನ ರಾಗ. ಹಾಗಾಗಿ ರಾಜ್ಯ ರಾಜಕಾರಣ ಸೋಮವಾರದಿಂದ ರಂಗೇರಲಿದೆ. ಮತ್ತೆ ಭೇಟಿಯಾಗೋಣ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications