ಅಪವಿತ್ರ ಮೈತ್ರಿ ದೂರವಿಡಿ, ಎನ್‌ಡಿಎಗೆ ಅವಕಾಶ ಕೊಡಿ -ಜೆಡಿಯು
ಅಪವಿತ್ರ ಮೈತ್ರಿ ದೂರವಿಡಿ, ಎನ್‌ಡಿಎಗೆ ಅವಕಾಶ ಕೊಡಿ -ಜೆಡಿಯು
ಹಠಮಾರಿ ಕಾಂಗ್ರೆಸ್‌ಗೆ ಎಂ.ಪಿ.ಪ್ರಕಾಶ್ ಎಚ್ಚರಿಕೆ
ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಬಿ.ಸೋಮಶೇಖರ್ ನೇತೃತ್ವದಲ್ಲಿ ಪಕ್ಷದ ನಿಯೋಗ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರನ್ನು ಬುಧವಾರ (ಮೇ 19) ಭೇಟಿ ಮಾಡಿತು. ವಿಧಾನಸಭೆ ಚುನಾವಣೆಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಭೇಟಿಯ ಕಾಲದಲ್ಲಿ ನಿಯೋಗ ಒತ್ತಾಯಿಸಿತು.
ಹೊಸ ಸರ್ಕಾರ ರಚಿಸುವಲ್ಲಿ ಇನ್ನೂ ವಿಳಂಬವಾಗಬಾರದು. ಅಧಿಕಾರಗ್ರಹಣಕ್ಕಗಿ ಅಪವಿತ್ರ ಹಾಗೂ ಅನೈತಿಕ ಮೈತ್ರಿಗೆ ಅವಕಾಶ ನೀಡಬಾರದು ಎಂದು ರಾಜ್ಯಪಾಲರಿಗೆ ಒತ್ತಿ ಹೇಳಿದುದಾಗಿ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ ಹೇಳಿದರು.
ನಮ್ಮ ದಾರಿ ನಮಗೆ -ಎಂ.ಪಿ.ಪ್ರಕಾಶ್
ಮುಖ್ಯಮಂತ್ರಿ ಸ್ಥಾನವನ್ನು ಜಾತ್ಯತೀತ ಜನತಾದಳಕ್ಕೆ ಕಾಂಗ್ರೆಸ್ ಬಿಟ್ಟುಕೊಡದಿದ್ದಲ್ಲಿ ನಮ್ಮ ದಾರಿ ನಾವು ನೋಡಿಕೊಳ್ಳುವುದಾಗಿ ಜೆಡಿಎಸ್ ಮುಖಂಡ ಎಂ.ಪಿ.ಪ್ರಕಾಶ್ ಎಚ್ಚರಿಸಿದ್ದಾರೆ.
ಹಠ ಮಾಡಿಕೊಂಡು ಕೂತರೆ ಪ್ರಯೋಜನವಿಲ್ಲ . ಸರ್ಕಾರ ರಚನೆಗಾಗಿ ಎರಡೂ ಪಕ್ಷಗಳು ಸ್ವಲ್ಪ ತ್ಯಾಗ ಮಾಡುವುದು ಅನಿವಾರ್ಯ. ಆದರೆ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರುವುದರಿಂದ ಮುಖ್ಯಮಂತ್ರಿಪಟ್ಟ ಜೆಡಿಎಸ್‌ಗೇ ಸಲ್ಲಬೇಕು ಎಂದು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ತಮ್ಮ ಕೋರಿಕೆಗೆ ಧನಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಜೆಡಿಎಸ್ ಅನಿವಾರ್ಯವಾಗಿ ಬೇರೆ ದಾರಿ ಹುಡುಕಲಿದೆ ಎಂದೂ ಅವರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications