ಪ್ರಧಾನಿ ಅಭ್ಯರ್ಥಿಯಾಗಿ ಡಾ. ಮನಮೋಹನ ಸಿಂಗ್ ಆಯ್ಕೆ ಸಂಭವ
ಪ್ರಧಾನಿ ಅಭ್ಯರ್ಥಿಯಾಗಿ ಡಾ. ಮನಮೋಹನ ಸಿಂಗ್ ಆಯ್ಕೆ ಸಂಭವ
ಆಂತರ್ಯಕ್ಕೆ ಓಗೊಟ್ಟ ಸೋನಿಯಾ ಪ್ರಧಾನಿ ಪದ ನಿರಾಕರಣೆ
ಅಧಿಕಾರವನ್ನು ನಾನು ಬಯಸಿದವಳಲ್ಲ. ಪ್ರಧಾನಿ ಆಗಬೇಕೆಂಬ ಅಭಿಲಾಷೆ ಇರಲಿಲ್ಲ. ಇದು ನನ್ನ ಆಂತರ್ಯದ ಮಾತುಗಳು. ಈ ಹುದ್ದೆಯನ್ನು ನಾನು ವಿನಮ್ರವಾಗಿ ನಿರಾಕರಿಸುತ್ತಿದ್ದೇನೆ. ನನ್ನ ಅಂತರಾತ್ಮದ ಅನಿಸಿಕೆಯಂತೆ ನಡೆಯಲು ನನಗೆ ಅವಕಾಶ ಕೊಡಿ. ಪಕ್ಷದ ಅಧ್ಯಕ್ಷೆಯಾಗಿ ನಾನು ನಿಮ್ಮೊಂದಿಗಿರುತ್ತೇನೆ. ಜಾತ್ಯತೀತೆಯನ್ನು ರಕ್ಷಿಸುವುದೇ ನನ್ನ ಧ್ಯೇಯ. ಸ್ಥಿರ ಸರಕಾರ ಮತ್ತು ಜನಪರ ಹೊರಾಟಕ್ಕಾಗಿ ನಾನು ಯಾವತ್ತೂ ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇ.18ರ ಮಂಗಳವಾರ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಹೇಳಿದರು.
ಇವರ ಪರಿಪರಿಯಾದ ವಿನಂತಿಯನ್ನು ಕೇಳಲು, ಒಪ್ಪಿಕೊಳ್ಳಲು ಯಾರೂ ಸಿದ್ಧವಿರಲಿಲ್ಲ. ಆದರೆ ಸೋನಿಯಾ ತನ್ನ ನಿರ್ಧಾರ ಬದಲಾಯಿಸಲಿಲ್ಲ. ಈ ಅಘಾತದಿಂದ ಎಚ್ಚೆತ್ತ ಕೆಲವು ಕಾಂಗ್ರೆಸ್ ಸಂಸದರು ಆಕ್ರೋಶ ವ್ಯಕ್ತಪಡಿಸಿದರೆ, ಹಲವರು ಆಕೆಗೆ ದುಂಬಾಲು ಬಿದ್ದರು. ಪಕ್ಷದ ಹಿರಿಯ ನಾಯಕರು ಆಕೆಯ ಮನವೊಲಿಕೆಗೆ ಪ್ರಯತ್ನಸಿದರು. ಯಾವುದೂ ಫಲ ನೀಡಲಿಲ್ಲ. ಸೋನಿಯಾ ಸತತ ಮನವಿಗಳನ್ನು ನಿರಾಕರಿಸಿ, ಸಂಸದರಲ್ಲಿ ಪರಿಪರಿಯಾಗಿ ತನ್ನ ಅಚಲ ನಿರ್ಧಾರವನ್ನು ಕೇಳಿಕೊಂಡರು. ಈ ಕುರಿತು ದೇಶದೆಲ್ಲೆಡೆ ಪರ ಮತ್ತು ವಿರೋಧಿ ಅಲೆಗಳು ವ್ಯಕ್ತವಾಗಿದೆ.
ನೂತನ ಪ್ರಧಾನಿ ಆಭ್ಯರ್ಥಿ ಯಾರು?
ಸೋನಿಯಾ ಮನವೊಲಿಕೆಯ ವಿಫಲ ಯತ್ನದ ಬಳಿಕ ಸಭೆ ಸೇರಿದ ಕಾಂಗ್ರೆಸ್ ಹಿರಿಯ ಮುಖಂಡರು ಶಾಸಕಾಂಗ ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರವನ್ನು ಕಾಂಗ್ರಸ್ ಅಧ್ಯಕ್ಷೆ ಸೋನಿಯಾ ಸುರ್ಪದಿಗೆ ಒಪ್ಪಿಸುವ ನಿರ್ಣಯ ಕೈಗೊಂಡಿದ್ದಾರೆ. ಕಾಂಗ್ರೆಸ್‌ಬೆಂಬಲಿಸಿದ ಎಡ ಪಕ್ಷಗಳು ಮನಮೋಹನ್ ಸಿಂಗ್ ಪ್ರಧಾನಿಯಾದರೆ ತಮ್ಮ ಆಭ್ಯಂತರವಿಲ್ಲ ಎಂದು ಹೇಳಿದೆ. ಆ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಆಯ್ಕೆಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications