ಸೋನಿಯಾ- ಮನಮೋಹನ್‌ರಿಂದ ರಾಷ್ಟ್ರಪತಿ ಕಲಾಂ ಮಹತ್ವದ ಭೇಟಿ
ಸೋನಿಯಾ- ಮನಮೋಹನ್‌ರಿಂದ ರಾಷ್ಟ್ರಪತಿ ಕಲಾಂ ಮಹತ್ವದ ಭೇಟಿ
ಸರಕಾರದಲ್ಲಿ ಪಾಲ್ಗೊಳ್ಳಲು ಡಿಎಮ್‌ಕೆ ನಿರ್ಧಾರ
ಇಂದು ಮನಮೋಹನ್ ಸಿಂಗ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ವಿಧೇಯಕ ಹೊರಡಿಸಲಾಗಿತ್ತು. ನಿನ್ನೆ ರಾತ್ರಿ ಸಭೆ ಸೇರಿದ ಪಕ್ಷದ ಹಿರಿಯ ನಾಯಕರು ಪ್ರಧಾನಿ ಆಯ್ಕೆ ಕುರಿತು ಸೋನಿಯಾ ಗಾಂಧಿಗೆ ಸಂಪೂರ್ಣ ಅಧಿಕಾರ ನೀಡಿದ್ದರು. ಆದ್ದರಿಂದ ಈ ವಿಧೇಯಕದ ಅಗತ್ಯ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ ಪ್ರಧಾನಿ ಆಭ್ಯರ್ಥಿ ಆಯ್ಕೆಯ ಕುರಿತು ಕಾಂಗ್ರೆಸ್ ಮಿತ್ರ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದಾರೆ. ಪಕ್ಷದ ಹಿರಿಯ ಮುಖಂಡರ ಹಾಗೂ ಮಿತ್ರ ಪಕ್ಷಗಳ ಸಮ್ಮತಿ ದೊರೆತ ಹಿನ್ನೆಲೆಯಲ್ಲಿ ಅವರು ರಾಷ್ಟ್ರಪತಿಯನ್ನು ಭೇಟಿ ಮಾಡಲಿದ್ದಾರೆ.
ಈ ನಡುವೆ ಡಿಎಮ್‌ಕೆ ನೂತನ ಸರಕಾರದಲ್ಲಿ ಭಾಗಿಯಾಗುತ್ತವೆ ಎಂದು ಹೇಳಿದೆ. ಎಡ ಪಕ್ಷಗಳು ಮತ್ತು ಸಮಾಜವಾದಿ ಪಕ್ಷ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದೆ.
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications