ಪ್ರತಿಭಟನೆಗೆ ಸೋತು ಪ್ರಧಾನಿಯಾಗಲು ಸೋನಿಯಾಗಾಂಧಿ ನಕಾರ?
ಪ್ರತಿಭಟನೆಗೆ ಸೋತು ಪ್ರಧಾನಿಯಾಗಲು ಸೋನಿಯಾಗಾಂಧಿ ನಕಾರ?
ಸಂಭಾವ್ಯರ ಪಟ್ಟಿಯಲ್ಲಿ ಪ್ರಣಬ್ ಹಾಗೂ ಮನಮೋಹನ್
ಕೇಂದ್ರದಲ್ಲಿ ರಚನೆಯಾಗುವ ಹೊಸ ಸರ್ಕಾರದ ನೇತತ್ವವನ್ನು ವಹಿಸಲು ತಾವು ಸಿದ್ಧವಿಲ್ಲ ಎನ್ನುವ ವಿಷಯವನ್ನು ಸೋನಿಯಾ ತಮ್ಮ ನಿಕಟವರ್ತಿಗಳಿಗೆ ತಿಳಿಸಿದ್ದಾರೆ. ಇದರಿಂದಾಗಿ ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಪ್ರಣಬ್ ಮುಖರ್ಜಿ ಅಥವಾ ಮನಮೋಹನ್‌ಸಿಂಗ್ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ ಎಂದು ರೀಡಿಫ್ ವರದಿ ತಿಳಿಸಿದೆ.
ರಾಷ್ಟ್ರಪತಿ ಭೇಟಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೇ 18ರ ಮಂಗಳವಾರ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದರು. ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸುವ ಕುರಿತು ಸೋನಿಯಾ ರಾಷ್ಟ್ರಪತಿ ಜೊತೆ ಚರ್ಚೆ ನಡೆಸಿದರು. ಸೋನಿಯಾ ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಕ ಮನಮೋಹನ್‌ಸಿಂಗ್ ಹಾಜರಿದ್ದರು.
ಮೇ 19ರ ಬುಧವಾರ ಸೋನಿಯಾಗಾಂಧಿ ರಾಷ್ಟ್ರಪತಿ ಕಲಾಂ ಅವರನ್ನು ಪುನಃ ಭೇಟಿ ಮಾಡುವರು. ಈ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಬೆಂಬಲ ಪತ್ರಗಳನ್ನು ರಾಷ್ಟ್ರಪತಿಗಳಿಗೆ ನೀಡುವರು.
(ಇನ್ಪೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications