ಸೋನಿಯಾರನ್ನು ನಂಬುವುದು ಹೇಗೆ ? ‘ಐಐಎಸ್‌ಸಿ’ ವಿಜ್ಞಾನಿ ಆತಂಕ
ಸೋನಿಯಾರನ್ನು ನಂಬುವುದು ಹೇಗೆ ? ‘ಐಐಎಸ್‌ಸಿ’ ವಿಜ್ಞಾನಿ ಆತಂಕ
ರಾಷ್ಟ್ರಪತಿ ಕಲಾಂಗೆ ಉಡುಪಿ ಶ್ರೀಗಳೊಂದಿಗೆ ಜಂಟಿ ಪತ್ರ
ದೇಶದ ರಕ್ಷಣೆ ಹಾಗೂ ಅಣ್ವಸ್ತ್ರಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ಇಟಲಿ ಮೂಲದ ಮಹಿಳೆ ಸೋನಿಯಾಗಾಂಧಿಅವರ ಕೈಗೊಪ್ಪಿಸುವುದು ಹೇಗೆ ? ಅವರನ್ನು ನಂಬುವುದು ಹೇಗೆ ? ಎಂದು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಬರೆದಿರುವ ಪತ್ರದಲ್ಲಿ ಐಐಎಸ್‌ಸಿಯ ವಿಜ್ಞಾನಿ ಎಸ್.ಎಂ.ದೇಶಪಾಂಡೆ ತಕರಾರು ಎತ್ತಿದ್ದಾರೆ.
ರಾಷ್ಟ್ರಪತಿ ಕಲಾಂ ಅವರಿಗೆ ಬರೆದಿರುವ ಪತ್ರವನ್ನು ದೇಶಪಾಂಡೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಈ ಪತ್ರಕ್ಕೆ ದೇಶಪಾಂಡೆ ಅವರೊಂದಿಗೆ ಉಡುಪಿಯ ಅದಮಾರು ಮಠಾಧೀಶ ಶ್ರೀ ವಿಬುಧೇಶ ತೀರ್ಥ ಸ್ವಾಮೀಜಿ ಸಹಿ ಹಾಕಿದ್ದಾರೆ.
ಪ್ರತಿಯಾಬ್ಬರೂ ತಾಯಿಯ ನಂತರ ತಾಯಿನಾಡನ್ನು ಅಧಿಕವಾಗಿ ಪ್ರೀತಿಸುತ್ತಾರೆ. ಆ ಕಾರಣದಿಂದ ದೇಶದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ವಿದೇಶಿ ಮೂಲದ ವ್ಯಕ್ತಿಯನ್ನು ಪ್ರಧಾನಿಯಾಗಿ ಮಾಡಲು ಸಾಧ್ಯವಿಲ್ಲ ಎಂದು ದೇಶಪಾಂಡೆ ತಮ್ಮ ಪತ್ರದಲ್ಲಿ ವಾದಿಸಿದ್ದಾರೆ. ಅಧ್ಯಕ್ಷ ಚುನಾವಣೆಗೆ ವಿದೇಶಿ ಮೂಲದ ವ್ಯಕ್ತಿಗಳ ಸ್ಪರ್ಧೆಯನ್ನು ಅಮೆರಿಕಾ ನಿಷೇಧಿಸಿರುವ ವಿಷಯವನ್ನು ದೇಶಪಾಂಡೆ ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications