ನೂತನ ರಾಜ್ಯ ಸರ್ಕಾರ ರಚನೆ : ರಾಜ್ಯಪಾಲರು ಸಿದ್ಧರಾಮಯ್ಯ ಚರ್ಚೆ
ನೂತನ ರಾಜ್ಯ ಸರ್ಕಾರ ರಚನೆ : ರಾಜ್ಯಪಾಲರು ಸಿದ್ಧರಾಮಯ್ಯ ಚರ್ಚೆ
ಮೇ 20ರವರೆಗೆ ಕಾಂಗ್ರೆಸ್-ಬಿಜೆಪಿ ಕಾಲಾವಕಾಶ ಕೇಳಿಕೆ
ಸರ್ಕಾರ ರಚನೆಯ ಕುರಿತಂತೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರುಗಳಿಗೆ ರಾಜ್ಯಪಾಲ ಚತುರ್ವೇದಿ ಆಹ್ವಾನ ನೀಡಿದ್ದರು. ಈ ಆಹ್ವಾನವನ್ನು ಮನ್ನಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ಧರಾಮಯ್ಯ ನೇತೃತ್ವದ ನಿಯೋಗ ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿತು.
ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ಖಚಿತ. ಈ ಕುರಿತು ಇನ್ನೆರಡು ಮೂರು ದಿನಗಳಲ್ಲಿ ಚಿತ್ರಣ ಸ್ಪಷ್ಟಗೊಳ್ಳಲಿದೆ ಎಂದು ಸಿದ್ಧರಾಮಯ್ಯ ರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು ಎಂದು ರಾಜಭವನ ಮೂಲಗಳು ತಿಳಿಸಿವೆ.
ಬಿಜೆಪಿ ಹಾಗೂ ಕಾಂಗ್ರೆಸ್ ರಾಜ್ಯಪಾಲರನ್ನು ಭೇಟಿ ಮಾಡಿಲ್ಲ . ಈ ಕುರಿತು ಮೇ 20ರವರೆಗೆ ಸಮಯ ನೀಡುವಂತೆ ಎರಡೂ ಪಕ್ಷಗಳು ರಾಜ್ಯಪಾಲರನ್ನು ಕೋರಿವೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications