ಕಾಂಗ್ರೆಸ್‌ಶಾಸಕಾಂಗ ಪಕ್ಷ ನಾಯಕನಾಗಿ ಧರ್ಮಸಿಂಗ್ ಆಯ್ಕೆ ಸಂಭವ
ಕಾಂಗ್ರೆಸ್‌ಶಾಸಕಾಂಗ ಪಕ್ಷ ನಾಯಕನಾಗಿ ಧರ್ಮಸಿಂಗ್ ಆಯ್ಕೆ ಸಂಭವ
ಮುಖ್ಯಮಂತ್ರಿ ಗಾದಿಗೆ ಮುಂದುವರಿದ ಸ್ಫರ್ಧೆ
ಮುಖ್ಯಮಂತ್ರಿ ಗಾದಿಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಈಗಲೇ ಜಗ್ಗಾಟ ಆರಂಭವಾಗಿದೆ. ಜೆಡಿಎಸ್ ಜಮ್ಮು ಮಾದರಿ ಮತ್ತು ಕಾಂಗ್ರೆಸ್ ಮಹರಾಷ್ಟ್ರ ಮಾದರಿ ಸರಕಾರ ರಚನೆಗೆ ಪಟ್ಟುಹಿಡಿದಿವೆ. ಈಗಾಗಲೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ಧರಾಮಯ್ಯ ಆಯ್ಕೆಯಾಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕನೇ ಮುಖ್ಯಮಂತ್ರಿ ಅಭ್ಯರ್ಥಿ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್ ಮಧ್ಯೆ ತೀರ್ವ ಸ್ಪರ್ಧೆ ನಿರೀಕ್ಷಿಸಲಾಗಿದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಧರ್ಮಸಿಂಗ್ ಈಗಾಗಲೇ ತಾವು ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿ ಎಂದು ಹೇಳಿದ್ದಾರೆ. ಅಲ್ಲದೆ ಕೃಷ್ಣ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಎಸ್ಸೆಂ ಕೃಷ್ಣ ಅವರು ಖರ್ಗೆ ಮತ್ತು ಧರ್ಮ ಸಿಂಗ್‌ನ್ನು ತಮ್ಮ ನಿವಾಸಕ್ಕೆ ಕರೆಯಿಸಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬಳಿಕ ಸಿಂಗ್ ಮತ್ತು ಕೃಷ್ಣ ದೆಹಲಿಗೆ ತೆರಳಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಬಿರುಸಿನ ಚಟುವಟಿಕೆಗಳಿಗೆ ನಾಂದಿ ಮಾಡಿದೆ. ಕೇಂದ್ರದಲ್ಲಿ ಸೋನಿಯಾ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯ ಸರಕಾರ ರಚನೆಯ ನಿರ್ಧಾರ ಹೊರ ಬೀಳಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications