ಸರ್ಕಾರ ರಚನೆ ಮಾತುಕತೆಗೆ ಬನ್ನಿ , ಸೂತ್ರಧಾರರಿಗೆ ಚತುರ್ವೇದಿ ಕರೆ
ಸರ್ಕಾರ ರಚನೆ ಮಾತುಕತೆಗೆ ಬನ್ನಿ , ಸೂತ್ರಧಾರರಿಗೆ ಚತುರ್ವೇದಿ ಕರೆ
ವಾರಾಂತ್ಯದೊಳಗೆ ನೂತನ ಸರ್ಕಾರ- ದೇವೇಗೌಡ
ನೂತನ ಸರ್ಕಾರ ರಚಿಸುವ ಸಂಬಂಧ ಮಾತುಕತೆಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರಿಗೆ ರಾಜ್ಯಪಾಲ ಚತುರ್ವೇದಿ ಸೋಮವಾರ (ಮೇ 17) ಆಹ್ವಾನ ಕಳುಹಿಸಿದ್ದಾರೆ. ಇದರೊಂದಿಗೆ ಸರ್ಕಾರ ರಚನೆಯ ಪ್ರಕ್ರಿಯೆ ಇನ್ನಷ್ಟು ಚುರುಕುಗೊಂಡಿದೆ.
ಅನಂತಕುಮಾರ್, ಜನಾರ್ಧನ ಪೂಜಾರಿ ಹಾಗೂ ಸಿದ್ಧರಾಮಯ್ಯನವರಿಗೆ ರಾಜ್ಯಪಾಲರ ಆಹ್ವಾನ ತಲುಪಿದೆ.
ಶನಿವಾರದೊಳಗೆ ಸರ್ಕಾರ : ವಾರಾಂತ್ಯದೊಳಗೆ ರಾಜ್ಯದಲ್ಲಿ ನೂತನ ಸರ್ಕಾರ ಜಾರಿಗೆ ಬರಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ನ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಸರ್ಕಾರ ರಚನೆಯ ಕುರಿತಂತೆ ಕಾಂಗ್ರೆಸ್‌ನೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ. ಶನಿವಾರದೊಳಗೆ ಸರ್ಕಾರ ರಚನೆ ಸಾಧ್ಯವಾಗಲಿದೆ ಎಂದು ದೇವೇಗೌಡ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications