ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ; ಮುಖ್ಯಮಂತ್ರಿಎಸ್ಸೆಂ.ಕೃಷ್ಣ ಚೌಕಾಶಿ
ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ; ಮುಖ್ಯಮಂತ್ರಿಎಸ್ಸೆಂ.ಕೃಷ್ಣ ಚೌಕಾಶಿ
ಮಹಾರಾಷ್ಟ್ರ ಮಾದರಿ ನೀತಿ ಒಪ್ಪಿಕೊಳ್ಳಲು ಜಾತ್ಯತೀತ ದಳಕ್ಕೆ ಒತ್ತಾಯ
ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಸರ್ಕಾರ ರಚನೆಯಾಗುವ ಕುರಿತು ಕಾಂಗ್ರೆಸ್ ಒಲವು ಹೊಂದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೃಷ್ಣ ಹೇಳಿದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಶರದ್‌ಪವಾರ್‌ರ ಎನ್‌ಸಿಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ರಚಿಸಿವೆ. ಈ ಸರ್ಕಾರದಲ್ಲಿ ದೊಡ್ಡ ಪಕ್ಷವಾದ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಆನಂತರದ ದೊಡ್ಡ ಪಕ್ಷವಾದ ಎನ್‌ಸಿಪಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆತಿದೆ.
ಕಾಂಗ್ರೆಸ್-ಎನ್‌ಸಿಪಿ ಸರ್ಕಾರದ ನೀತಿ ರಾಜ್ಯದಲ್ಲೂ ಜಾರಿಗೆ ಬರಬೇಕು. ಜಾತ್ಯತೀತ ಜನತಾದಳ ಮಹಾರಾಷ್ಟ್ರ ಮಾದರಿಯನ್ನು ಒಪ್ಪಿಕೊಳ್ಳುವುದು ಒಳಿತು ಎಂದು ಕೃಷ್ಣ ಹೇಳಿದರು.
ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಸಮ್ಮಿಶ್ರ ಸರ್ಕಾರದ ಕುರಿತು ಅಪಸ್ವರ ಎತ್ತಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ನಡವಳಿಕೆಯನ್ನು ಕೃಷ್ಣ ಟೀಕಿಸಿದರು. ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ನಿಜ. ಬಿಜೆಪಿ ಸರ್ಕಾರ ರಚಿಸುವ ಧೈರ್ಯ ಮಾಡಲಿ ಎಂದು ಕೃಷ್ಣ ಮಾರ್ಮಿಕವಾಗಿ ನುಡಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications