ಜಾತ್ಯತೀತ ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯ
ಜಾತ್ಯತೀತ ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯ
ರಾಜ್ಯದಲ್ಲೂ ಜಮ್ಮು ಕಾಶ್ಮೀರ ಮಾದರಿ ಸರಕಾರ ಸಂಭವ
ನಗರದಲ್ಲಿ ಮೇ16ರ ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸರಕಾರ ರಚಿಸುವ ನಿರ್ಧಾರಕ್ಕೆ ಬರಲಾಗಿದೆ. ನೂತನ ಸರಕಾರ ರಚನೆಯ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಸಂಪೂರ್ಣ ಅಧಿಕಾರ ನೀಡಲಾಯಿತು.
ಬಿಜೆಪಿಯನ್ನು ಅಧಿಕಾರ ಪರಿಧಿಯಿಂದ ಹೊರಗಿಟ್ಟು ಸರಕಾರ ರಚಿಸಲು ಸಭೆ ನಿರ್ಣಯಿಸಿತು. ಈಗಿನ ಜಮ್ಮು ಸರಕಾರದ ಮಾದರಿಯಲ್ಲಿ ಎರಡೂವರೆ ವರ್ಷಗಳ ಕಾಲ ಜೆಡಿಎಸ್ ಅಧಿಕಾರ ನಡೆಸುವುದು. ಮುಂದಿನ ಎರಡೂವರೆ ವರ್ಷ ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟು ಕೊಡುವುದು ಎಂದು ಸಭೆ ನಿರ್ಣಯಿಸಿದೆ.
ಇನ್ನು ಒಂದೆರಡು ದಿನಗಳಲ್ಲಿ ಸೋನಿಯಾ ಅವರನ್ನು ಭೇಟಿ ಮಾಡುತ್ತೇನೆ. ಯಾವ ರೀತಿಯ ಸರಕಾರ ರಚನೆ ಸಾಧ್ಯವಾಗುತ್ತ ದೆಯೋ ನೋಡಬೇಕು ಎಂದು ದೇವೇಗೌಡ ಹೇಳಿದರು.
ನಮ್ಮ ಪಕ್ಷದ ಜಾತ್ಯತೀತ, ರೈತಪರ, ಬಡವರ , ಹಿಂದುಳಿದವರ ಹಾಗೂ ತುಳಿತಕ್ಕೆ ಒಳಗಾದವರ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ. ಪಕ್ಷದ ಪ್ರಣಾಳಿಕೆಯ ಅಂಶ ಹಾಗೂ ಅಸ್ತಿತ್ವವನ್ನು ಉಳಿಸಿಕೊಡು ಸರಕಾರ ರಚಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ ನಮಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ನಾವಾಗಿ ಬೆಂಬಲ ಕೋರಿ ಅವರ ಬಳಿ ಹೋಗಿಲ್ಲ. ಆರ್ಥಿಕ, ಮಾಧ್ಯಮ, ಅಧಿಕಾರ ಬೆಂಬಲ ಎಲ್ಲವೂ ನಮ್ಮ ವಿರುದ್ಧವಿತ್ತು. ನಾವು ನಮ್ಮ ಹೊರಾಟದಿಂದಲೇ ಗೆದ್ದಿದ್ದೇವೆ. ಅನೇಕರು ತುಳಿಯಲು ಪ್ರಯತ್ನಿಸಿದರು, ಸಾಧ್ಯವಾಗಲಿಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.
ನಮ್ಮ ಹಿಂದಿನ ತಪ್ಪು ಗಳಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಇನ್ನು ಮುಂದೆ ಅಧಿಕಾರಕ್ಕಾಗಿ ಕಚ್ಚಾಡುವುದಿಲ್ಲ. ಸಿದ್ಧರಾಮಯ್ಯ ನಮ್ಮ ವಿವಾದಾತೀತ ನಾಯಕ ಎಂದು ಎಂ.ಪಿ.ಪ್ರಕಾಶ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications