ಭ್ರಷ್ಟ ಆಡಳಿತ ನೀಡಿದ ಸರ್ಕಾರಕ್ಕೆ ಜನರ ಪ್ರತ್ಯುತ್ತರ - ಸಿದ್ಧರಾಮಯ್ಯ
ಭ್ರಷ್ಟ ಆಡಳಿತ ನೀಡಿದ ಸರ್ಕಾರಕ್ಕೆ ಜನರ ಪ್ರತ್ಯುತ್ತರ - ಸಿದ್ಧರಾಮಯ್ಯ
ಜೆಡಿಎಸ್ ಬೆಂಬಲದ ಬಗ್ಗೆ ಜೇಟ್ಲಿ ಆಶಾವಾದ
ಅತ್ಯಂತ ಭ್ರಷ್ಟ ಆಡಳಿತವನ್ನು ನೀಡಿದ್ದಕ್ಕೆ ಜನರು ಸರಿಯಾಗಿಯೇ ಪ್ರಕ್ರಿಯಿಸಿದ್ದಾರೆ. ಕೃಷ್ಣ ಸರ್ಕಾರದಿಂದ ಜನ ಎಷ್ಟು ರೋಸಿ ಹೋಗಿರುವುರರೆಂಬುದಕ್ಕೆ ಪ್ರಕಟವಾಗಿರುವ ಚುನಾವಣಾ ಫಲಿತಾಂಶವೇ ಪ್ರತ್ಯಕ್ಷ ನಿದರ್ಶನ ಎಂದು ಸಿದ್ಧರಾಮಯ್ಯ ಅವರು ಅಭಿಪ್ರಾಯ ಪಟ್ಟರು. ವಿಜಯೋತ್ಸವದ ನಂತರ ಮೈಸೂರಿನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು- ಬಿಜೆಪಿಯ ಜೊತೆ ಸೇರಿ ಸರ್ಕಾರ ನಡೆಸುವಿರಾ ಎಂಬ ಪ್ರಶ್ನೆಗೆ ತಲೆ ಅಲ್ಲಾಡಿಸಿದರು.
ಇತ್ತ ಬಿಜೆಪಿ ನಾಯಕ ಅರುಣ್ ಜೇಟ್ಲಿ ಜಾತ್ಯತೀತ ಜನತಾದಳದ ಬೆಂಬಲ ತಮ್ಮ ಪಕ್ಷಕ್ಕೆ ದೊರಕುವ ಕುರಿತು ಆಶಾಭಾವ ವ್ಯಕ್ತಪಡಿಸಿದ್ದಾರೆ. ಸಿದ್ಧರಾಮಯ್ಯನವರ ಮಾತಿಗೆ ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ ಎಂದು ಅವರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications